ಮಡಿಕೇರಿ, ಜೂ.19: ಖಾದಿ ಗ್ರಾಮೋದ್ಯೋಗ ಆಯೋಗ ಮತ್ತು ಭಾಗಮಂಡಲ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ನಿಗಮ, ಇವರ ಜಂಟಿ ಆಶ್ರಯದಲ್ಲಿ ಕೊಡಗು ಜಿಲ್ಲಾ ಜೇನು ಕೃಷಿಕರ ಸಮಾವೇಶವು ತಾ. 20 ರಂದು ಬೆಳಿಗ್ಗೆ 10 ಗಂಟೆಗೆ ಭಾಗಮಂಡಲ ಗೌಡ ಸಮಾಜದಲ್ಲಿ ನಡೆಯಲಿದೆ. ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ನಿಗಮದ ಅಧ್ಯಕ್ಷ ಹೆಚ್.ಜೆ. ಸತೀಶ್ ಕುಮಾರ್, ಜಿ.ಪಂ. ಸದಸೆÀ್ಯ ಕವಿತಾ ಪ್ರಭಾಕರ್, ಭಾಗಮಂಡಲ ಗ್ರಾ.ಪಂ.ಅಧ್ಯಕ್ಷ ಹೆಚ್.ಜೆ.ಸುಮಿತ್ರ, ತಾ.ಪಂ. ಸದಸೆÀ್ಯ ಸಂಧ್ಯಾ, ಬೆಂಗಳೂರಿನ ಕೆವಿಐಸಿ ಸಹಾಯಕ ನಿರ್ದೇಶಕ ಮೋಸಸ್‍ಸಿಂಗ್, ಪೊನ್ನಂಪೇಟೆ ಅರಣ್ಯ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಡಾ.ಆರ್.ಎನ್. ಕೆಂಚರೆಡ್ಡಿ, ಸುಳ್ಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮುಖ್ಯ ತರಬೇತಿದಾರ ಕೆ.ವೀರಪ್ಪಗೌಡ ಇತರರು ಪಾಲ್ಗೊಳ್ಳಲಿದ್ದಾರೆ.