ಮಡಿಕೇರಿ, ಜೂ.19: ಪೊನ್ನಂಪೇಟೆ ನಾಗರಿಕ ವೇದಿಕೆಯ ಸಮಿತಿಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರನ್ನು ಸನ್ಮಾನಿಸಲಾಯಿತು. ತಾ. 14ರಂದು ಕೊಡವ ಸಮಾಜದಲ್ಲಿ ನಡೆದ ಸಮಾರಂಭದಲ್ಲಿ ವೇದಿಕೆ ಅಧ್ಯಕ್ಷ ಪಿ.ಬಿ. ಪೂಣಚ್ಚ, ಉಪಾಧ್ಯಕ್ಷ ಸಿ.ಕೆ. ಸೋಮಯ್ಯ, ಕಾರ್ಯದರ್ಶಿ ಎಂ.ಎ. ಅಪ್ಪಯ್ಯ, ಸಮಿತಿಯ ಪದಾಧಿಕಾರಿಗಳಾದ ಎ.ಪಿ. ಎರ್ಮು ಹಾಜಿ, ವಿ.ಎ. ಸೆಲ್ವರಾಜ್, ಎಂ.ಪಿ. ಅಪ್ಪಚ್ಚು, ಮೂಕಳೇರ ಕುಶಾಲಪ್ಪ, ಕಟ್ಟೇರ ಲಾಲಪ್ಪ, ಕಾಳೇಂಗಡ ಗಣಪತಿ, ವಕೀಲ ಮಾಚಿಮಂಡ ಸುರೇಶ್ ಅಯ್ಯಪ್ಪ ಹಾಗೂ ಇತರರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.