ಸೋಮವಾರಪೇಟೆ, ಜೂ. 17: ಸಾಲ ಮಾಡುವ ಬದಲು ಪ್ರತಿಯೋರ್ವರೂ ತಮ್ಮ ಆದಾಯ ದಲ್ಲಿಯೇ ಒಂದು ಭಾಗವನ್ನು ಉಳಿತಾಯ ಮಾಡುವ ಮನೋಭಾವನೆಯನ್ನು ಬೆಳೆಸಿ ಕೊಳ್ಳಬೇಕು ಎಂದು ಸಹಕಾರ ಸಂಘಗಳ ವಿಶ್ರಾಂತ ಉಪನಿಬಂಧಕ ಬಿ.ಪಿ. ಬಸಪ್ಪ ಕರೆ ನೀಡಿದರು.

ಪಟ್ಟಣದ ಶ್ರೀ ರಾಮ ಮಂದಿರದಲ್ಲಿ ಆಯೋಜಿಸಿದ್ದ ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ ಸಂಘವನ್ನು ಉದ್ಘಾಟಿಸಿ ಮಾತನಾಡಿ ದರು.

ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಬಿ.ಡಿ. ಮಂಜುನಾಥ್ ಮಾತನಾಡಿ, ಸದಸ್ಯರುಗಳಲ್ಲಿ ಪರಸ್ಪರ ಸಹಕಾರವನ್ನು ವೃದ್ಧಿಗೊಳಿಸುವ ಪ್ರಯತ್ನಕ್ಕಾಗಿ ಈ ನೂತನ ಸಹಕಾರ ಸಂಘವನ್ನು ಆರಂಭಿಸಲಾಗಿದೆ ಎಂದರು. ಉಪನಿಬಂಧಕ ಭಾಸ್ಕರ್ ಆಚಾರ್ಯ, ಸಹಾಯಕರಾದ ಮೋಹನ್ ಹಾಗೂ ಚುನಾವಣಾಧಿ ಕಾರಿ ಸಂದೀಪ್ ಅವರುಗಳನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಎನ್. ರಮೇಶ್, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ರಾಮಶೆಟ್ಟಿ, ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಸಹಕಾರ ಸಂಘದ ಪ್ರಭಾರ ಕಾರ್ಯದರ್ಶಿ ಬಿ.ಎಂ. ಶ್ರೀಧರ್ ಉಪಸ್ಥಿತರಿದ್ದರು.