ಪಾಲಿಸಲು ಸಲಹೆ
ವೀರಾಜಪೇಟೆ, ಜೂ. 17: ಶಿವಾಜಿ ಮಾಹಾರಾಜರ ಕೊಡುಗೆಗಳು ಅಪಾರ. ಪ್ರತಿಯೊಬ್ಬ ಹಿಂದೂವಿನಲ್ಲೂ ಶಿವಾಜಿಯ ಅದರ್ಶ ಗುಣಗಳನ್ನು ಪಾಲನೆ ಮಾಡುವಂತಾಗಬೇಕು ಎಂದು ಸೇವಾ ಭಾರತಿ ಜಿಲ್ಲಾಧ್ಯಕ್ಷ ಟಿ.ಸಿ ಚಂದ್ರನ್ ತಿಳಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಬಾಲಅಂಜನೇಯ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಹಿಂದೂ ಸಮ್ರಾಜ್ಯ ಉತ್ಸವದಲ್ಲಿ ಮತನಾಡಿದ ಅವರು, ಸ್ವಾಬಿಮಾನಿ ರಾಷ್ಟø ನಿರ್ಮಾಣ ಮಾಡುವಲ್ಲಿ ಶಿವಾಜಿ ಶ್ರಮ ಅಧ್ವಿತೀಯವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಕಾರ್ಯವಾಹ ಅಯ್ಯಪ್ಪ, ನಗರ ಕಾರ್ಯವಾಹ ಹೇಮಂತ್ ಮತ್ತು ರಾ.ಸ್ವ.ಸೇ ಸಂಘದ ಕಾರ್ಯಕರ್ತರು ಹಾಗೂ ನಗರದ ವಿವಿದಡೆಗಳಿಂದ ಆಗಮಿಸಿದ ಹಿತೈಷಿಗಳು ಹಾಜರಿದ್ದರು.