ಚೆಟ್ಟಳ್ಳಿ: ನೆಲ್ಲಿಹುದಿಕೇರಿಯ ದಾರುನ್ನಜಾತ್ ಸುನ್ನಿ ಸೆಂಟರ್ ಮದರಸಾ ಪತ್ಹೇ ಮುಬಾರಕ್ ಕಾರ್ಯಕ್ರಮದೊಂದಿಗೆ ಪುನರಾರಂಭ ಮಾಡಲಾಯಿತು.
ರಂಜಾನ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಒಂದು ತಿಂಗಳ ರಜೆಯನ್ನು ನೀಡಾಲಾಗಿತ್ತು. ಈ ಸಂದರ್ಭ ಮದರಸ ಅಧ್ಯಾಪಕ ಜುಬೈರ್ ಸಹದಿ, ಸ್ವಬಾಹ್ ಸಖಾಫು, ಅಧ್ಯಕ್ಷ ಮುಸ್ತಫಾ ಮೊದಲಾದವರು ಇದ್ದರು.ಶನಿವಾರಸಂತೆ: ಧಾರ್ಮಿಕ ಮೌಲ್ಯಗಳನ್ನು ಅಳವಡಿಸಿ ಮಕ್ಕಳನ್ನು ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸಲು ಮದ್ರಸಗಳು ಅತ್ಯವಶ್ಯಕ ಎಂದು ತಹಲ್ಲಿಯಾತ್ ಮದ್ರಸದ ಮುಖ್ಯಗುರು ರಫೀಖ್ ಬಾಲವಿ ಅಭಿಪ್ರಾಯಪಟ್ಟರು. ಸಮೀಪದ ಕೊಡ್ಲಿಪೇಟೆಯ ತಜಲ್ಲಿಯಾತ್ ಮದ್ರಸದಲ್ಲಿ ನಡೆದ ನೂತನ ಅಧ್ಯಯನ ವರ್ಷದ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮದ್ರಸ ಪ್ರಾಂಶುಪಾಲ ಅಶ್ರಫ್ ಮಿಸ್ಬಾಹಿ ಮಾತನಾಡಿ, ಸುಸಂಸ್ಕøತ ಸಮಾಜ ನಿರ್ಮಾಣವಾಗಬೇಕಾದರೆ ಬಾಲ್ಯದಲ್ಲೇ ಮಕ್ಕಳಿಗೆ ಧಾರ್ಮಿಕ ಚಿಂತನೆಗಳನ್ನು ಕಲಿಸಬೇಕು ಎಂದರು.
ಅಧ್ಯಕ್ಷತೆಯನ್ನು ಮದ್ರಸ ಆಡಳಿತ ಮಂಡಳಿ ಅಧ್ಯಕ್ಷ ಸುಲೈಮಾನ್ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಹನೀಫ್, ನೂರ್ ಯೂತ್ ಅಸೋಸಿಯೇಷನ್ ನಿರ್ದೇಶಕ ಝಹೀರ್, ನಿಝಾಮಿ, ರಹೀಂ, ಅಶ್ರಫ್, ಬಾಸಿತ್ ಹಾಜಿ ಉಪಸ್ಥಿತರಿದ್ದರು.ಕಡಂಗ: ಕಡಂಗದ ಬದ್ರಿಯಾ ಮದರಸ ಪತ್ಹೇ ಮುಬಾರಕ್ ಕಾರ್ಯಕ್ರಮದೊಂದಿಗೆ ಪುನಾರಾರಂಭಗೊಂಡಿದೆ. ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಹಾರಿಸ್ ಸಖಾಫಿ, ಮುಖ್ಯೋಪಾಧ್ಯಾಯ ರಶೀದ್ ಮುಸ್ಲಿಯಾರ್, ಯಹ್ಯಾ ಸಹದಿ, ಸಿ.ಎ ರಜಾಕ್ ಇದ್ದರು.ಸೋಮವಾರಪೇಟೆ: ರಮಝಾನ್ ಪ್ರಯುಕ್ತ ರಜೆ ನೀಡಲಾಗಿದ್ದ ಸೋಮವಾರಪೇಟೆಯ ಜಲಾಲಿಯ ಮದ್ರಸ ಫತ್ಹೇ ಮುಬಾರಕ್ ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಪುನರಾರಂಭ ಮಾಡಲಾಯಿತು. ಜಮಾಅತ್ ಅಧ್ಯಕ್ಷ ಆದಂ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ಮಾತನಾಡಿದರು. ಮದ್ರಸ ಪ್ರಧಾನ ಅಧ್ಯಾಪಕ ಮುನೀರ್ ಸಅದಿ ಕೊಳಕೇರಿ, ಸಾಲಿಹ್ ರಹ್ಮಾನಿ, ಮದ್ರಸ ಮೇಲ್ವಿಚಾರಕ ಮುಹಿಯದ್ದೀನ್, ಎಂ.ಬಿ. ಮುಹಮ್ಮದ್ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.