ಶನಿವಾರಸಂತೆ, ಜೂ. 17: ಗೌಡಳ್ಳಿ ಗ್ರಾಮದ ಬಿಜಿಎಸ್ ವಿದ್ಯಾಸಂಸ್ಥೆ ಬಳಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಂಬ ಮುರಿದು ಬಿದ್ದ ಘಟನೆ ನಡೆದಿದೆ.
ಗ್ರಾಮಸ್ಥರು ತಕ್ಷಣ ಶನಿವಾರಸಂತೆಯ ಸೆಸ್ಕ್ಗೆ ದೂರು ಸಲ್ಲಿಸಿದರು. ಸ್ಪಂದಿಸಿದ ಸೆಸ್ಕ್ ಅಧಿಕಾರಿ ಹೇಮಂತ್ ಹಾಗೂ 15 ಮಂದಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಾತ್ರಿ 9 ಗಂಟೆಯವರೆಗೂ ಕಾರ್ಯಪ್ರವೃತ್ತರಾಗಿ ಮುರಿದು ಬಿದ್ದ ಕಂಬವನ್ನು ಸ್ಥಳಾಂತರಿಸಿ ನೂತನ ವಿದ್ಯುತ್ ಕಂಬವನ್ನು ಅಳವಡಿಸಿದರು. ಗ್ರಾಮಕ್ಕೆ ಬೆಳಕು ನೀಡಿದರು. ರಾತ್ರಿ ಕತ್ತಲಲ್ಲಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿದ ವಿದ್ಯುತ್ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಗ್ರಾಮಸ್ಥರು ಶ್ಲಾಘಿಸಿದರು.