ಮಡಿಕೇರಿ, ಜೂ.17 : ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮಾಸಿಕ ಆರೋಗ್ಯ ವೃತ್ತ ಸಭೆಯನ್ನು ನಾಪೋಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಸಭೆ ನಡೆಸಲು ಒತ್ತಾಯಿಸಿ ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದೆ.

ನಾಪೋಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿದ್ದ ಮಾಸಿಕ ಆರೋಗ್ಯ ವೃತ್ತ ಸಭೆಯಲ್ಲಿ 42 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಭಾಗವಹಿಸುತ್ತಿದ್ದರು.

ಈಗ ಚೇರಂಬಾಣೆ, ಚೆಯ್ಯಂಡಾಣೆ, ಮೂರ್ನಾಡು ಹಾಗೂ ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯುವ ಸಭೆಗೆ ತೆರಳುವಂತೆ ಸೂಚಿಸಲಾಗಿದೆ. ಈ ಹಿಂದಿನಂತೆ ನಾಪೋಕ್ಲು ಆರೋಗ್ಯ ಕೇಂದ್ರದಲ್ಲೇ ಸಭೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷೆ ವಿ.ಹೆಚ್.ನಾಗರತ್ನ ಒತ್ತಾಯಿಸಿದ್ದಾರೆ.