ಮಡಿಕೇರಿ, ಜೂ. 17: ಹೆದ್ದಾರಿ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಅಡ್ಡ ಬಂದ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಗಂಭೀರ ಗಾಯಕ್ಕೊಳಗಾಗಿರುವ ಮತ್ತು ಸವಾರ ಸಣ್ಣಪುಟ್ಟ ಪೆಟ್ಟಿನಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಂಭವಿಸಿದೆ. ಸುಂಟಿಕೊಪ್ಪ ಸಮೀಪದ ಸೆವೆಂತ್ ಮೈಲ್‍ನ ವಿಠಲ್ ರೈ ಮತ್ತು ಪುನೀತ್ ಎಂಬಿಬ್ಬರು ಗಾಯಾಳುಗಳಾಗಿದ್ದಾರೆ. ಇವರಿಬ್ಬರು ಇಂದು ಬೆಳಿಗ್ಗೆ 11.30ರ ಸಮಯದಲ್ಲಿ ಸೆವೆಂತ್ ಮೈಲ್‍ನಿಂದ ಮಡಿಕೇರಿಗೆಂದು ಬೈಕ್‍ನಲ್ಲಿ ತೆರಳುತ್ತಿದ್ದಾಗ, ಮಾರ್ಗಮಧ್ಯದ ಕೆದಕಲ್ ಶ್ರೀ ಭದ್ರಕಾಳೇಶ್ವರಿ ದೇವಾಲಯದ ಬಳಿಯ ಸ್ಪೈಸಸ್ ಅಂಗಡಿ ಮುಂಭಾಗದಲ್ಲಿ ಮಡಿಕೇರಿಗೆ ಅಭಿಮುಖವಾಗಿ &divound;ಂತಿದ್ದ ಕಾರೊಂದು ಸುಂಟಿಕೊಪ್ಪ ಕಡೆಗೆ ತಿರುಗಿಸುವ ಭರದಲ್ಲಿ ಹೆದ್ದಾರಿಗೆ ಅಡ್ಡಬಂದಿದೆ. ಇದ್ದಕ್ಕಿದ್ದಂತೆ ಕಾರು ರಸ್ತೆ ಮಧ್ಯಕ್ಕೆ ಅಡ್ಡವಾಗಿ ಬಂದ ಕಾರಣ ನಿಯಂತ್ರಣ ಕಳೆದುಕೊಂಡ ಬೈಕ್ ಕಾರಿಗೆ ಅಪ್ಪಳಿಸಿದೆ. ಕಾರಿಗೆ ಬೈಕ್ ಡಿಕ್ಕಿಯಾದ ರಭಸಕ್ಕೆ ಹಿಂಬದಿ ಸವಾರ ಕೌಶಿಕ್ ಕಾರಿನ ಮೇಲ್ಭಾಗದಿಂದ ಹಾರಿ ಕೆಳಗೆ ಬಿದ್ದಿದ್ದಾನೆ. ಇದರಿಂದ ತಲೆಗೆ ತೀವ್ರವಾಗಿ ಗಾಯಗೊಂಡ ಕೌಶಿಕ್‍ನನ್ನು ಮತ್ತು ಸಣ್ಣಪುಟ್ಟ ಗಾಯಕ್ಕೊಳಗಾಗಿರುವ ಬೈಕ್ ಸವಾರ ಪುನೀತ್‍ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. -ಕ್ಯೂಟ್ ಕೂರ್ಗ್ ನ್ಯೂಸ್