ಮಡಿಕೇರಿ, ಜೂ. 17 : ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳ ಪ್ರವೇಶಾತಿ ಆರಂಭಗೊಂಡಿದ್ದು, ಈ ಸಂಬಂಧ ಕಾಲೇಜಿನಲ್ಲಿರುವ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲು ಹಾಗೂ ಕೋರ್ಸುಗಳ ಕುರಿತು ಗೊಂದಲ ನಿವಾರಿಸಲು ತೆರೆದ ಮನೆ (ಓಪನ್ ಹೌಸ್) ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ 2012 ರಿಂದಲೇ ಆರಂಭಗೊಂಡಿದ್ದು, ಇದೀಗ ಭೌತಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲೀಷ್, ಎಂಬಿಎ ಟೂರಿಸಂ ಅಂಡ್ ಟ್ರಾವೆಲ್ ಮೇನೇಜ್‍ಮೆಂಟ್, ವಾಣಿಜ್ಯ ಶಾಸ್ತ್ರ ಹಾಗೂ ಯೋಗವಿಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸುಗಳು ಲಭ್ಯವಿದ್ದು, ಅರ್ಜಿಗಳನ್ನು ನೀಡಲಾಗುತ್ತಿದ್ದು, ಭರ್ತಿ ಮಾಡಿದ ಅರ್ಜಿಯನ್ನು ತಾ. 28 ರೊಳಗೆ ಸಲ್ಲಿಸಬಹುದು.