ಮಡಿಕೇರಿ, ಜೂ. 17: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶಿಶು ಕಲ್ಯಾಣ ಸಂಸ್ಥೆ ಯಲ್ಲಿ ಜಿಲ್ಲಾ ಮಟ್ಟದ ಶಾಲಾ ಪೂರ್ವ ಶಿಕ್ಷಣ ಅಭಿವೃದ್ಧಿ ಕಾರ್ಯಾಗಾರ ಮೈಸೂರು ಪ್ರಥಮ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಯಿತು.
ಅಂಗನವಾಡಿಗಳ ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸುವ ಹಿನ್ನೆಲೆಯಲ್ಲಿ ಈ ಕಾರ್ಯಾಗಾರ ವನ್ನು ಏರ್ಪಡಿಸ ಲಾಗಿತ್ತು. ಮಕ್ಕಳಿಗೆ ಪೂರಕವಾದ ಆಟೋಟಗಳನ್ನು ಹೇಳಿ ಕೊಡಲಾಯಿತು.
ಪ್ರಥಮ್ ಸಂಸ್ಥೆ ಮೈಸೂರಿ ನಿಂದ ಸಂಪನ್ಮೂಲ ವ್ಯಕ್ತಿಗಳಾದ ಸರಸ್ವತಿ, ಕಾವ್ಯ ನಿಶ್ಮಾ ಹಾಗೂ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಹಾಗೂ ಅಣ್ಣಯ್ಯ ಕಾರ್ಯಕ್ರಮ ದಲ್ಲಿ ಹಾಜರಿದ್ದರು.