ಮಡಿಕೇರಿ, ಜೂ. 18: ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಮಿತಿ ಪ್ರವರ್ಗ-1 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರೂ. 2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ ಹಾಗೂ 3ಬಿ, ರೂ. 1 ಲಕ್ಷ ಒಳಗಿರಬೇಕು. ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಜುಲೈ 12 ಕೊನೆಯ ದಿನವಾಗಿರುತ್ತದೆ. ಇ-ಮೇಲ್ ತಿತಿತಿ.bಚಿಛಿಞತಿಚಿಡಿಜ ಛಿಟಚಿsses.ಞಚಿಡಿ.ಟಿiಛಿ.iಟಿ, hಣಣಠಿ://ಞಚಿಡಿeಠಿಚಿss.ಛಿgg.gov.iಟಿ, ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಗಳಾದಲ್ಲಿ bಛಿತಿhosಣeಟಚಿಜmissioಟಿ @gmಚಿiಟ.ಛಿom ಗೆ ಇ-ಮೇಲ್ ಮುಖಾಂತರ ದಾಖಲೆಗಳೊಂದಿಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 9448205919 ಅಥವಾ ಕಚೇರಿ ಸಂಖ್ಯೆ 08727-298037, ವೀರಾಜಪೇಟೆ 9448205919, 08274-249211, ಸೋಮವಾರಪೇಟೆ 9632225847, 08272-284820 ಹಾಗೂ ಜಿಲ್ಲಾ ಕಚೇರಿ 08272-225628 ಸಹಾಯವಾಣಿ 080-65970006 ನ್ನು ಕಚೇರಿ ವೇಳೆಯಲ್ಲಿ ಕರೆ ಮಾಡಿ ಮಾಹಿತಿ ಪಡೆಯಬಹುದು.