ಸೋಮವಾರಪೇಟೆ, ಜೂ. 18: ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯಮಿ ಹರಪಳ್ಳಿ ರವೀಂದ್ರ ಅವರು ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು. ಕಳೆದ 16 ವರ್ಷಗಳಿಂದ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿರುವ ಅವರು, ತಮ್ಮ ಮನೆಯ ಆವರಣದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳನ್ನು ವಿತರಣೆ ಮಾಡಿದರು.

ಶಾಲಾ ಶಿಕ್ಷಕರಿಂದ ನೀಡಲಾಗಿದ್ದ ಪುಸ್ತಕಗಳ ದೃಢೀಕರಣ ಪತ್ರಕ್ಕೆ ಅನುಸಾರವಾಗಿ, ಅವಶ್ಯವಿರುವಷ್ಟು ಪುಸ್ತಕಗಳನ್ನು ವಿತರಣೆ ಮಾಡಿದ ರವೀಂದ್ರ ಮಕ್ಕಳ ಭವಿಷ್ಯಕ್ಕೆ ಶಿಕ್ಷಣವೇ ಆಧಾರವಾಗಿದ್ದು, ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅಭಿಪ್ರಾಯಿಸಿದರು. ನಗರಳ್ಳಿ ಗ್ರಾಮದ ಬಸಪ್ಪ, ಜಗದೀಶ್, ಸುಷ್ಮಾ, ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗರಾಜು, ಪದಾಧಿಕಾರಿ ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.