ಗೋಣಿಕೊಪ್ಪಲು, ಜೂ.15: ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿಯೊಂದಿಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಕೊಡಗಿನ ಜನತೆಯ ಆಶೀರ್ವಾದ ಹಾಗೂ ಸತತ ಪರಿಶ್ರಮದಿಂದಾಗಿ ಮುಂದೆ ಹೊಸ ಜಾಗ, ಜನರೊಂದಿಗೆ ನ್ಯಾಯಾಂಗದ ಗೌರವ ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ವಾಗಬೇಕಾಗಿದೆ. ಪೆÇನ್ನಂಪೇಟೆ ವಕೀಲರ ಸಂಘದಲ್ಲಿ ಮನೆಯಂತೆ ಆತ್ಮೀಯ ವಾತಾವರಣವಿದೆ ಎಂದು ಸನ್ಮಾನ ಸ್ವೀಕರಿಸಿ ಸರ್ವೋಚ್ಚ ನ್ಯಾಯಾಲಯದ ನೂತನ ನ್ಯಾಯಾಧೀಶರಾದ ಅಜ್ಜಿಕುಟ್ಟೀರ ಎಸ್.ಬೋಪಣ್ಣ ಹೇಳಿದರು.

ಪೆÇನ್ನಂಪೇಟೆ ವಕೀಲರ ಸಂಘದ ಆಶ್ರಯದಲ್ಲಿ ತಾ.14 ರಂದು ಸಂಜೆ ನ್ಯಾಯಾಲಯದ ಆವರಣದಲ್ಲಿ ಜರುಗಿದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೆಂಗಳೂರುವಿನಲ್ಲಿ 1984ರಲ್ಲಿ ವಕೀಲನಾಗಿ ವೃತ್ತಿ ಆರಂಭಿಸಿದ ಸಂದರ್ಭ ಹೆಚ್ಚಾಗಿ ಕೊಡಗು ಜನತೆಯ ನಿಕಟ ಸಂಪರ್ಕವಿರಲಿಲ್ಲ. ಉಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸಿದ ಸಂದರ್ಭ ಕೊಡಗಿನ ಹಲವು ವಕೀಲರ ಪರಿಚಯವಾಯಿತು. ನ್ಯಾಯಾಲಯ ದಲ್ಲಿ ತೀರ್ಪು ಹೊರಬಿದ್ದ ನಂತರ ಕಾರ್ಯಾಂಗ ವ್ಯಾಪ್ತಿಯಲ್ಲಿ ಬರುವ ಕಂದಾಯ ಇಲಾಖೆಯಲ್ಲಿ ಆದೇಶ ಅನುಷ್ಠಾನಗೊಳ್ಳದೆ ಕಕ್ಷಿದಾರರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪವಿದ್ದು, ತನ್ನ ಅವಧಿಯಲ್ಲಿ ಈ ಬಗ್ಗೆ ನ್ಯಾಯ ಒದಗಿಸಲು ಪ್ರಯತ್ನಿಸುವದಾಗಿ ಹೇಳಿದರು. ಮೈಸೂರು ವಕೀಲರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ವಕೀಲ ಪಾಂಡಂಡ ಡಿ.ಮೇದಪ್ಪ ಅವರು ಮಾತನಾಡಿ, ನ್ಯಾಯಮೂರ್ತಿ ಬೋಪಣ್ಣ ಅವರು ಶ್ರೇಷ್ಠವಾದ ಅರ್ಹಹುದ್ದೆಯನ್ನು ಅಲಂಕರಿಸಿದ್ದಾರೆ. ಸತತ ಪರಿಶ್ರಮ, ಮನೋಶಕ್ತಿ, ತಾಳ್ಮೆ ಮತ್ತು ಅಪಾರ ಜ್ಞಾನದಿಂದ ಕೊಡಗು ಜಿಲ್ಲೆಗೆ ಕೀರ್ತಿ ತರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯ ಮೂರ್ತಿಯಾಗಿ ಪದೋನ್ನತಿ ಹೊಂದಿದ್ದಾರೆ. ನ್ಯಾಯಾಲಯದ ಆದೇಶಗಳು ರೆವಿನ್ಯೂ ಇಲಾಖೆ, ಉಪವಿಭಾಗಾಧಿಕಾರಿ, ಉಪ ನೋಂದಣಾಧಿಕಾರಿ, ಪೆÇಲೀಸ್ ಇಲಾಖೆ, ಗ್ರಾ.ಪಂ.ಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಬೆಸುಗೆ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ನ್ಯಾಯಮೂರ್ತಿ ಬೋಪಣ್ಣ ಅವರು ಚಿಂತನೆ ಹರಿಸಬೇಕು. ನ್ಯಾಯಾಲಯ ಕಲಾಪದ ಬಗ್ಗೆ ಶ್ರೀ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವೂ ಆಗಬೇಕಾಗಿದೆ ಎಂದು ಹೇಳಿದರು.

ಹಿರಿಯ ವಕೀಲರು, ಸಮಾಜಸೇವಕ ಎ.ಟಿ. ಭೀಮಯ್ಯ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ನ್ಯಾಯಮೂರ್ತಿ ಬೋಪಣ್ಣ ಅವರ ಗುಣಗಾನ ಮಾಡಿದ ಭೀಮಯ್ಯ ಅವರು, ಮುಂದೆ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಲಿ, ಭಾರತದ ರಾಷ್ಟ್ರಪತಿಯಾಗುವ ಅವಕಾಶವೂ ಒದಗಿಬರಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೆÇನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಎಸ್.ಡಿ.ಕಾವೇರಪ್ಪ ಅವರು, ಪೆÇನ್ನಂಪೇಟೆಯ ನೂತನ ನ್ಯಾಯಾಲಯ ಸಮುಚ್ಛಯ ಶೀಘ್ರ ನಿರ್ಮಾಣಗೊಳ್ಳುವ ನಿಟ್ಟಿನಲ್ಲಿ ಈ ಹಿಂದೆ ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಎ.ಎಸ್. ಬೋಪಣ್ಣ ಅವರ ಸಹಕಾರವೂ ಅಮೂಲ್ಯ. ದ್ವಿತೀಯ ಅಂತಸ್ತಿನ ನ್ಯಾಯಾಲಯ ಸಂಕೀರ್ಣವನ್ನು ಬೋಪಣ್ಣ ಅವರೇ ಉದ್ಘಾಟನೆ ನೆರವೇರಿಸಿದ್ದರು. ಇದೀಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯಾಗಿ ನೇಮಕವಾಗಿರುವ ಅವರಿಂದ ಮುಂದೆ ಉತ್ತಮ ತೀರ್ಪುಗಳು ಹೊರಬರಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ನ್ಯಾಯ ಮೂರ್ತಿ ಬೋಪಣ್ಣ ಅವರೊಂದಿಗೆ ಪತ್ನಿ ಮೋನ ಬೋಪಣ್ಣ ಅವರನ್ನೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವೀರಾಜಪೇಟೆಯ ಹಿರಿಯ ಶ್ರೇಣಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಡಿ.ಆರ್. ಜಯಪ್ರಕಾಶ್, ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಲಕ್ಷಣ್ ಶಿವಾನಂದ್ ಅಂಚಿ, ಅಪರ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಕೋನಪ್ಪ, ಹಿರಿಯ ವಕೀಲರಾದ ಕೆ.ಎಂ. ಗಣಪತಿ, ಕೆ.ಕೆ.ಭೀಮಯ್ಯ, ಎಂ.ಪಿ.ಅಪ್ಪಚ್ಚು, ಬಿ.ಎಸ್. ಕಾರ್ಯಪ್ಪ, ಮಲ್ಲಂಗಡ ಚಂಗಪ್ಪ, ಎಂ.ಬಿ.ನಾಣಯ್ಯ, ಮಾಚಿಮಂಡ ಸುರೇಶ್, ಎಂ.ಎಂ. ಅಯ್ಯಪ್ಪ, ನೆಲ್ಲಮಕ್ಕಡ ವಷಿಷ್ಠಾ ಮಾದಯ್ಯ, ಖಜಾಂಚಿ ಕೆ.ಬಿ. ಸಂಜೀವ್, ಪ್ರಧಾನ ಕಾರ್ಯದರ್ಶಿ ಎಂ.ಜಿ.ರಾಖೇಶ್, ಮಾಜಿ ಕಾರ್ಯದರ್ಶಿ ಎಂ.ಟಿ.ಕಾರ್ಯಪ್ಪ, ಜೀವನ್ ಮುಂತಾದವರು ಉಪಸ್ಠಿತರಿದ್ದರು. ಪ್ರಾರ್ಥನೆ ಕುಮಾರಿ ದೇಚಕ್ಕ, ವಂದನಾರ್ಪಣೆ ಕಂಜಿತಂಡ ಅನಿತಾ ನಿರ್ವಹಿಸಿದರು.