ವೀರಾಜಪೇಟೆ, ಜೂ. 16: ವೀರಾಜಪೇಟೆ ವಿಭಾಗದಲ್ಲಿ ಮುಂಗಾರು ಮಳೆ ಇಳಿಮುಖಗೊಂಡಿದ್ದು ಇಂದು ಬೆಳಗಿನಿಂದಲೇ ಮಳೆ ಬಿಡುವು ನೀಡಿದೆ.
ಮುಂಗಾರು ಮಳೆ ಸುರಿಯುತ್ತಿದ್ದು ಕೇರಳ ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶಿಸಿದ್ದು, ಕೊಡಗು ಕೇರಳ ಗಡಿ ಪ್ರದೇಶದಿಂದ ಮುಂಗಾರು ಪ್ರವೇಶಿಸಿದೆ.
ಐದು ದಿನಗಳಿಂದ ಸುರಿದ ಮಳೆಗೆ ಇಲ್ಲಿನ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿ ಮಣ್ಣಿನ ಬರೆ ಕುಸಿದು ಅಪಾಯದ ಅಂಚಿನಲ್ಲಿದ್ದರೆ ಇನ್ನು ಯಾವದೇ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಮಳೆ ಕಡಿಮೆಯಾಗಿದೆ.