ಮಡಿಕೇರಿ, ಜೂ. 16: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು ಸೇರಿದಂತೆ ಶ್ರೀಮಂಗಲ ಸೆಸ್ಕ್ ಶಾಖಾ ಕಚೇರಿ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆಯನ್ನು ವಿರೋಧಿಸಿ ತಾ. 17 ರಂದು (ಇಂದು) ಸಾರ್ವಜನಿಕರು ಹಮ್ಮಿಕೊಂಡಿರುವ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲ ವ್ಯಕ್ತಪಡಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಸಂಘದ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಅವರು ಸಮಸ್ಯೆಗಳ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಮಳೆಗಾಲದ ತೀವ್ರತೆ ಆರಂಭಗೊಳ್ಳುವ ಮುನ್ನವೇ ಸಮಸ್ಯೆ ನಿರಂತರವಾಗಿ ಕಂಡುಬರುತ್ತಿದೆ. ಸ್ಥಳೀಯವಾಗಿ ಬದುಕುತ್ತಿರುವ ನಿವಾಸಿಗಳ ಮೂಲಭೂತ ಅಗತ್ಯತೆಯ ಕುರಿತಾದ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವದಾಗಿ ಅವರು ತಿಳಿಸಿದ್ದಾರೆ.