ವೀರಾಜಪೇಟೆ, ಜೂ. 16: ಕೊಡಗು ದಫ್ ಸಮಿತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾನ್ವೇಷಣೆ ಸ್ಪರ್ಧೆಯ ಫೈನಲ್ಸ್‍ನಲ್ಲಿ ಕೊಡಗರಹಳ್ಳಿಯ ಕಮರುದ್ದೀನ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಕೊಡಗು ದಫ್ ಸಮಿತಿಯಿಂದ ಇಲ್ಲಿನ ಡಿ ಎಚ್ ಎಸ್ ಎನ್‍ಕ್ಲೇವ್ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಇಸ್ಲಾಮಿಕ್ ಮಾಪಿಳಾಪಾಟ್ ಮಲಸರಂ’ನ ಫೈನಲ್ಸ್‍ನ ಸಮಾರಂಭದಲ್ಲಿ ಕೊನೆಗೆ ಐದು ಮಂದಿಯನ್ನು ಆಯ್ಕೆ ಮಾಡಲಾಗಿದ್ದು ಎರಡನೇ ಸ್ಥಾನವನ್ನು ಗುಂಡಿಕೆರೆಯ ಕಿಲಹರ್, ಮೂರನೇ ಸ್ಥಾನವನ್ನು ಕುಂಜಿಲ ಗ್ರಾಮದ ಶಫೀಕ್, ನಾಲ್ಕನೇ ಸ್ಥಾನವನ್ನು ಎಮ್ಮೆಮಾಡುವಿನ ಇನಾಕ್ ಹಾಗೂ ಐದನೇ ಸ್ಥಾನವನ್ನು ಕಡಂಗ ಗ್ರಾಮದ ನೌಪಾಲ್ ಪಡೆದುಕೊಂಡಿದ್ದಾರೆ.
ದಫ್ ಸಮಿತಿಯಿಂದ ಇಸ್ಲಾಮಿಕ್ ಧರ್ಮಾನುಸಾರ ಭಕ್ತಿ ಗೀತೆಗಳ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಈ ಸ್ಪರ್ಧೆಯಲ್ಲಿ ಜಿಲ್ಲೆಯಾದ್ಯಂತ 42 ಮಂದಿಗಳು ಭಾಗವಹಿಸಿದ್ದರು.
ಬಹುಮಾನ ವಿತರಿಸುವ ಸಮಾರಂಭವನ್ನು ಕೊಡಗಿನ ನಹೀಬ್ ಖಾಜಿ ಅಬ್ದುಲ್ಲಾ ಫೈಜಿ ಉದ್ಘಾಟಿಸಿದರು.
ಸಮಾರಂಭವನ್ನುದ್ದೇಶಿಸಿ ಕೊಡವ ಮುಸ್ಲಿಂ ಅಸೋಯೇಷನ್ ಅಧ್ಯಕ್ಷ ಸೂಫಿ ಹಾಜಿ, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ, ಕೊಡಗು ದಫ್ ಸಮಿತಿಯ ಸಂಸ್ಥಾಪಕ ಚೋಕಂಡಳ್ಳಿಯ ಮಜೀದ್, ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ, ಕೊಡಗಿನ ಬಡವರ ಬೆಳಕು ಸಂಘಟನೆಯ ಉಪಾಧ್ಯಕ್ಷ ಎಚ್.ಎಂ ಷರೀಫ್, ಕಡಂಗದ ಫತಾಹ, ಚೋಕಂಡಳ್ಳಿಯ ಮುಸ್ಲಿಂ ಜಮಾತ್‍ನ ಅಧ್ಯಕ್ಷ ಪಿ.ಎ. ಹನೀಫ್, ಚಾಮಿಯಾಲ್‍ನ ಮಹಮ್ಮದ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ವೈ. ಆಲಿ, ಗುಂಡಿಗೆರೆಯ ಎಂ.ಎ. ಅಬ್ಬಾಸ್, ನಾಲ್ಕುನಾಡಿನ ನಾಸೀರ್ ಮಕ್ಕಿ, ನಿವೃತ್ತ ಖಜಾನೆ ಅಧಿಕಾರಿ ಉಸ್ಮಾನ್ ಹಾಜಿ ಅಬ್ದುಲ್ ಅಜೀಜ್ ಸಖಾಫಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ದಫ್ ಸಮಿತಿ ಅಧ್ಯಕ್ಷ ಚಾಮಿಯಾಲ್‍ನ ಕೆ.ಎಂ. ನಜೀರ್ ವಹಿಸಿದ್ದರು. ಎನ್.ಸಿ.ಟಿ. ಟೂರ್ಸ್ ಅಂಡ್ ಟ್ರಾವಲ್ಸ್‍ನ ಅಕಲತಂಡ ಮೊಯ್ದು ಉಪಸ್ಥಿತರಿದ್ದರು.
ಮಹಮ್ಮದ್ ಉಸ್ತಾದ್ ಪ್ರಾರ್ಥಿಸಿದರು. ಕೊಡಗಿನ ಬಡವರ ಬೆಳಕು ಸಂಘಟನೆಯ ಕಾರ್ಯದರ್ಶಿ ಗುಂಡಿಗೆರೆ ಶಫೀಕ್ ಸ್ವಾಗತಿಸಿದರು. ಚೋಕಂಡಳ್ಳಿ ಮಜೀದ್ ನಿರೂಪಿಸಿದರು. ಸಂಘಟನೆಯ ಸದಸ್ಯ ಎನ್.ಎಂ. ಬಶೀರ್ ವಂದಿಸಿದರು.