ಮಡಿಕೇರಿ, ಜೂ. 16: ಭಾರತ ಸರಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ರಾಷ್ಟ್ರೀಯ ಯುವದಳ ಸೇವಾ ಕಾರ್ಯಕರ್ತರಾಗಿ ಒಂದು ವರ್ಷದ ಅವಧಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನಿಸಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ.

18 ರಿಂದ 29 ವರ್ಷ ವಯೋಮಾನದೊಳಗಿರುವ ಹತ್ತನೇ ತರಗತಿಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಿರುವ ಯುವಜನರು ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ ಗೌರವಧನವನ್ನು ನೀಡಲಾಗುತ್ತದೆ. ಪದವಿಪೂರ್ವ, ಪದವಿಧರ ಮಹಿಳೆಯರಿಗೆ ಆದ್ಯತೆ ಇದೆ. ಆಯ್ಕೆಯಾದ ಸೇವಾ ಕಾರ್ಯಕರ್ತರು ಯುವ ಹಾಗೂ ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಸ್ವಚ್ಛ ಭಾರತ್ ಮಿಷನ್, ಪ್ರಧಾನ ಮಂತ್ರಿಯ ಜನ್-ಧನ್ ಯೋಜನೆ, ಜಾಗೃತ ಆಂದೋಲನ ಇತರ ಕಾರ್ಯಕ್ರಮಗಳನ್ನು ಹಾಗೂ ಆರೋಗ್ಯ, ಸಾಕ್ಷರತೆ, ಗ್ರಾಮ ನೈರ್ಮಲ್ಯ ಮುಂತಾದ ಕಾರ್ಯಕ್ರಮಗಳನ್ನು ಆಯಾ ತಾಲೂಕುಗಳಲ್ಲಿ ನೆಹರು ಯುವ ಕೇಂದ್ರದ ಮುಖಾಂತರ ಅನುಷ್ಠಾನಗೊಳಿಸಬೇಕು. ನೂತನವಾಗಿ ಸಂಘ, ಮಂಡಳಿಗಳನ್ನು ಸಂಸ್ಥಾಪಿಸಬೇಕು. ಅರ್ಜಿ ಸಲ್ಲಿಸುವವರು ಅರ್ಜಿಯನ್ನು ಜಿಲ್ಲಾ ಯುವಜನ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಯಶು ನಿಲಯ, ಕಾವೇರಿ ಲೇಔಟ್, ಬ್ಲಾಕ್ ನಂ. 8, ಮಡಿಕೇರಿ - 571 201, ಇಲ್ಲಿ ಪಡೆದು ತಾ. 21 ರೊಳಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು - ಸಲ್ಲಿಸದವರು ನೇರವಾಗಿ ತಾ. 24 ರ ಅಪರಾಹ್ನ 3 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಂದರ್ಶನಕ್ಕೆ ಮೂಲ ದಾಖಲಾತಿಗಳೊಂದಿಗೆ ಹಾಜರಾಗಲು ಕೋರಲಾಗಿದೆ. ದೂ. 9901312526, 9008137503, 08272-225470 ಗಳಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.