ಮಡಿಕೇರಿ, ಜೂ. 15: ಖಾಸಗಿ ಬಸ್‍ವೊಂದು ಅಡ್ಡರಸ್ತೆಯಿಂದ ಮುಖ್ಯರಸ್ತೆಗೆ ತಿರುವು ತೆಗೆದುಕೊಳ್ಳಲು ವಿಫಲವಾಗಿ ಮುಂದಕ್ಕೆ ಚಲಿಸಲಾಗದೇ; ಹಿಂದಕ್ಕೂ ಚಲಿಸಲಾಗದೇ ಸುಮಾರು ಅರ್ಧ ಗಂಟೆಯ ಕಾಲ ಹೆದ್ದಾರಿಗೆ ಅಡ್ಡವಾಗಿ ನಿಂತ ಪರಿಣಾಮ ಇತರೆ ವಾಹನಗಳ ಸಂಚಾರಕ್ಕೆ ತೊಡಕುಂಟಾದ ಘಟನೆ ಇಂದು ಮಧ್ಯಾಹ್ನ 3 ಗಂಟೆಗೆ ಕೆದಕಲ್ ಗ್ರಾಮ ಪಂಚಾಯತಿ ಕಚೇರಿ ಸಮೀಪ ನಡೆಯಿತು. ಕೆಲ ಸಮಯ ಹರಸಾಹಸದ ಬಳಿಕ ಬಸ್ ಅನ್ನು ತೆರವುಗೊಳಿಸಲಾಯಿತು.