ಗೋಣಿಕೊಪ್ಪಲು, ಜೂ. 15: ಬಾಳೆಲೆ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮೂರು ಸಿಸಿ ಕ್ಯಾಮೆರಾ ಅಳವಡಿಸಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡುವದಾಗಿ ಕೊಡಗು ಜಿಲ್ಲಾ ಪೆÇಲೀಸ್ ಅಧೀಕ್ಷಕಿ ಡಾ. ಸುಮನ್ ಪಣ್ಣೇಕರ್ ಭರವಸೆ ನೀಡಿರುವದಾಗಿ ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ತಿಳಿಸಿದ್ದಾರೆ.

ಇಂದು ಗೋಣಿಕೊಪ್ಪಲಿನಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ನಿನ್ನೆ ದಿನ ಇಲ್ಲಿನ ಕಳತ್ಮಾಡು ವಿಜ್ಞಾನ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ ದುಷ್ಕರ್ಮಿಯ ಗುಂಡೇಟಿಗೆ ಅಮಾನುಷವಾಗಿ ಬಲಿಯಾದ ನಂತರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೆÇಲೀಸ್ ಅಧೀಕ್ಷಕಿ ಡಾ.ಸುಮನ್ ಡಿ.ಪನ್ನೇಕರ್ ಅವರಿಗೆ ಗ್ರಾಮದ ಮುಖಂಡರು ಹಲವು ಸಲಹೆ ನೀಡಿರುವದಾಗಿ ತಿಳಿಸಿದ್ದಾರೆ.

ಬಾಳೆಲೆ ಪಟ್ಟಣಕ್ಕೆ ಆಗಮಿಸುವ ಮುನ್ನವೇ ಸಿಗುವ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ ರಸ್ತೆ ಹಾಗೂ ಗಣಪತಿ ದೇವಸ್ಥಾನ ಮುಂಭಾಗ ಒಂದು ಸಿಸಿ ಕ್ಯಾಮೆರಾ, ನಗರದ ಜಂಕ್ಷನ್ ನಲ್ಲಿ ಒಂದು ಕ್ಯಾಮೆರಾ ಹಾಗೂ ಕೊಡವ ಸಮಾಜ ಮುಂಭಾಗ ಒಂದು ಸಿಸಿ ಕ್ಯಾಮೆರಾ ಅಳವಡಿಸುವ ಅಗತ್ಯವಿದೆ ಎಂದು ಅಲ್ಲಿನ ವಿಜಯಲಕ್ಷ್ಮಿ ಪ.ಪೂ.ಕಾಲೇಜು ಅಧ್ಯಕ್ಷ ಮತ್ತು ಪಿಸಿಎಂಎಸ್ ಅಧ್ಯಕ್ಷ ಅಳಮೇಂಗಡ ಬೋಸ್ ದೇವಯ್ಯ ಖುದ್ದು ಎಸ್‍ಪಿ ಅವರಲ್ಲಿ ಮನವಿ ಮಾಡಿರುವದಾಗಿ ಸತೀಶ್ ದೇವಯ್ಯ ತಿಳಿಸಿದ್ದಾರೆ. ಬಾಳೆಲೆಗೆ 5 ಪೆÇಲೀಸ್ ಸಿಬ್ಬಂದಿಗಳ ಅಗತ್ಯವಿದ್ದು, ಇದೀಗ ಕೇವಲ ಇಬ್ಬರು ಪೆÇಲೀಸರು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ ಕಾನೂನು ಸುವ್ಯವಸ್ಥೆ ಪಾಲನೆ ಅಸಾಧ್ಯವೆಂದು ಸತೀಶ್ ದೇವಯ್ಯ ತಿಳಿಸಿದ ಮೇರೆ ಕೂಡಲೆ ಅಗತ್ಯ ಸಿಬ್ಬಂದಿ ನೇಮಕದ ಬಗ್ಗೆ ಪೆÇಲೀಸ್ ಅಧೀಕ್ಷಕಿ ಸುಮನ್ ಡಿ. ಪಣ್ಣೇಕರ್ ಭರವಸೆ ನೀಡಿರುವದಾಗಿ ತಿಳಿಸಿದ್ದಾರೆ.