ಸಿದ್ದಾಪುರ, ಜೂ. 16: ಲಾರಿಯೊಂದು ಅವಘಡಕ್ಕೀಡಾಗಿ ಲಾರಿಯ ಕ್ಲೀನರ್ ಸಾವನ್ನಪ್ಪಿ, ಚಾಲಕ ಗಾಯಗೊಂಡ ಘಟನೆ ಕಳೆದ ರಾತ್ರಿ ವಾಲ್ನೂರು ಸಮೀಪ ನಡೆದಿದೆ. ಕೇರಳದಿಂದ ಕುಶಾಲನಗರಕ್ಕೆ ಕೆಂಪು ಕಲ್ಲುಗಳನ್ನು ತುಂಬಿಕೊಂಡು ಬಂದು ಹಿಂತಿರುಗುತ್ತಿದ್ದ ವೇಳೆ ವಾಲ್ನೂರು ಸಮೀಪ ಲಾರಿಯು ಬರೆಗೆ ಅಪ್ಪಳಿಸಿದೆ. ಪರಿಣಾಮ ಲಾರಿಯ ಕ್ಲೀನರ್ ಕಣ್ಣೂರು ಜಿಲ್ಲೆಯ ಇರಿಟ್ಟಿಯ ಪಡಿಯೂರು ನಿವಾಸಿ ಶಾಫಿ (36) ಎಂಬಾತ ಸಾವನ್ನಪ್ಪಿದ್ದು, ಲಾರಿಯ ಚಾಲಕ ಇರಿಟ್ಟಿಯ ಅಸ್ಕರ್ (27) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.