ಗೋಣಿಕೊಪ್ಪಲು,ಜೂ.16: ಇಲ್ಲಿನ ಲಯನ್ಸ್ ಪ್ರೌಢಶಾಲಾ ವಿಜ್ಞಾನ ಶಿಕ್ಷಕಿ ಆಶಾ ಕಾವೇರಮ್ಮ ಅವರ ಕೊನೆಯ ಕ್ಷಣಗಳು ಹೃದಯ ವಿದ್ರಾಹಕ. ಬೆಳಿಗ್ಗೆ ತನ್ನ ತೋಟದ ಮುಂಭಾಗವೇ ತಾನು ಇಹಲೋಕ ತ್ಯಜಿಸಬಹುದು ಎಂಬ ಕಿಂಚಿತ್ತೂ ಸಂಶಯವೂ ನತದೃಷ್ಟ ಶಿಕ್ಷಕಿಯ ಮನಸ್ಸಿನಲ್ಲಿ ಇರಲಿಲ್ಲ. ಪತಿಯಿಲ್ಲದ ಬದುಕು ಅಸಹನೀಯ ಎಂದು ತನ್ನ ಸಹೋದ್ಯೋಗಿ ಶಿಕ್ಷಕರಲ್ಲಿ ಆಗಿಂದಾಗ್ಗೆ ದುಃಖ ತೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಆರೋಪಿ ಜಗದೀಶ್ ವಿರುದ್ಧ ಮನೆ ಕೆಲಸದವಳ ಮೇಲಿನ ಅತ್ಯಾಚಾರ ಆರೋಪ, ತನ್ನ ಫೆÇೀಟೋ ‘ಮಾಪ್’ ಬಗ್ಗೆ ಪೆÇಲೀಸ್ ಠಾಣೆಗೆ ದೂರಿತ್ತ ಹಿನ್ನೆಲೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.ಎಲ್ಲೋ ಏನೋ ಕಾನೂನು ಹೋರಾಟದಲ್ಲಿ ತಾನು ಗೆಲ್ಲುವೆ ಎಂಬ ಅಚಲ ನಂಬಿಕೆ ಅವರಲ್ಲಿತ್ತು. ತಾ.13ರಂದು ವೀರಾಜಪೇಟೆ ನ್ಯಾಯಾಲಯದಿಂದ ಹಿಂತಿರುಗಿದ ಸಂದರ್ಭ ತನ್ನನ್ನು ದಿನವೂ ಕರೆದೊಯ್ಯುವ ಶಾಲಾ ಬಸ್ ಚಾಲಕ ಹಾಗೂ ಸಿಬ್ಬಂದಿಗೆ ಸಿಹಿ ಹಂಚಿದ್ದರು. ಎಲ್ಲ ಸಿಬ್ಬಂದಿಗಳು ಆಶಾಮೇಡಂ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದರು. ಶಾಲೆಯಲ್ಲಿಯೂ ಉತ್ತಮ ಶಿಕ್ಷಕಿ ಎಂದು ಹೆಸರು ಮಾಡಿದ್ದರು.ಆದರೆ ತನ್ನ ಬೆನ್ನ ಹಿಂದೆಯೇ ತಾ.14 ರಂದು ಮುಂಜಾನೆ ಜವರಾಯ ಕಾದುಕುಳಿತಿ ರುವದು ಅವರಿಗೆ ಗೊತ್ತಿರಲಿಲ್ಲ. ಆಶಾರವರ ಕಾಫಿ ತೋಟದಲ್ಲಿಯೇ ಅವಿತಿದ್ದ ಆಗಂತುಕ, ಎಂ.ಜಗದೀಶ್‍ನ ಒಂಟಿನಳಿಕೆಯ ಕೋವಿ ಕ್ಷಣ ಮಾತ್ರದಲ್ಲಿ ಆಶಾರ ಕುತ್ತಿಗೆಯ ಭಾಗಕ್ಕೆ ಘಾಸಿಗೊಳಿಸುತ್ತದೆ. ನಂತರದ ಕ್ಷಣ ಕ್ಷಣವೂ ಭಯಾನಕ ಬರ್ಬರ ಅಮಾನುಷ...
ಹಲವು ಹೆಣ್ಣು ಮಕ್ಕಳ ಭವಿಷ್ಯಕ್ಕೆ, ಸಾಮಾಜಿಕ ಬದುಕಿಗೆ ಕೊಳ್ಳಿ ಇಡುತ್ತಿದ್ದ ಜಗದೀಶ್ ಮುಂದೆ, ತಾನು ಖಾಯಂ ಜೈಲು ಪಾಲಾಗುವ ಭಯದಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಂಡಿರುವದು ಮತ್ತೊಂದು ಭಯಾನಕ ನಿರ್ಧಾರವಾದರೂ ಹಲವರು
(ಮೊದಲ ಪುಟದಿಂದ) ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದು ನೇಪಥ್ಯಕ್ಕೆ ಸರಿದ ಘಟನೆ ಎಂದರೂ ಇಬ್ಬರ ಸಾವಿನ ನಂತರ ಮತ್ತಿಬ್ಬರು ನರಳುತ್ತಿದ್ದಾರೆ.
ಬಾಳೆಲೆ ಉಪ ಪೆÇಲೀಸ್ ಠಾಣೆ ಸಮೀಪದ ಬಸ್ ತಂಗುದಾಣದ ಸಮೀಪ ತಾ.14ರಂದು ಬೆಳಿಗ್ಗೆ ಕಳತ್ಮಾಡು ಲಯನ್ಸ್ ಶಾಲೆಗೆ ತೆರಳಲು ಶಾಲಾ ಬಸ್ಸಿಗೆ ಶಿಕ್ಷಕಿ ಆಶಾ ಕಾವೇರಮ್ಮ ಬೆಳಿಗ್ಗೆ 8.10 ಗಂಟೆ ಸುಮಾರಿಗೆ ಕಾಯುತ್ತಿದ್ದರು.
ಶಿಕ್ಷಕಿ ಆಶಾ ಕಾವೇರಮ್ಮ ಅವರನ್ನು ಹತ್ಯೆಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ದೃಢ ನಿರ್ಧಾರ ಮಾಡಿದ್ದ ಹಂತಕ ಜಗದೀಶ್ ಆಶಾ ಅವರ ತೋಟದ ಲ್ಲಿಯೇ ಅವಿತುಕೊಂಡು ಕಾದಿದ್ದ. ಸೂರ್ಯ ಪೂರ್ವದಲ್ಲಿ ಉದಯಿಸುವ ಮುನ್ನವೇ ಈತ ಆಶಾ ತೋಟಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ.ಈತನ ಜತೆಗೆ ಒಂದಷ್ಟು ಬ್ರ್ರೆಡ್ ಹಾಗೂ ಒಂದು ಬಾಟಲ್ ನೀರು ತಂದಿದ್ದ. ಆದರೆ, ಅದನ್ನು ಆತ ಉಪಯೋಗಿಸಿರಲಿಲ್ಲ ಎನ್ನಲಾಗಿದೆ. ಆಶಾ ಶಾಲಾ ಬಸ್‍ಗಾಗಿ ಕಾಯುವ ಜಾಗ, ಹೊರಡುವ ಸಮಯ ಮೊದಲೇ ಗೊತ್ತಿದ್ದರಿಂದ ಜಗದೀಶ್ ಎಣಿಕೆ ತಪ್ಪಾಗಲಿಲ್ಲ.
ಒಂಟಿ ನಳಿಕೆಯ ಕೋವಿಯಿಂದ ಮೊದಲೇ ನಿರ್ಧರಿಸಿದಂತೆ ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ಮೊದಲು ಗುಂಡು ಹಾರಿಸುತ್ತಾನೆ. ಈ ಹಂತದಲ್ಲಿ ದಿಢೀರ್ ಘಟನೆಯಿಂದ ಶಿಕ್ಷಕಿ ಆಶಾ ಪ್ರಜ್ಞೆ ತಪ್ಪುವದಿಲ್ಲ.ಬದಲಿಗೆ ತನಗೆ ತಲೆ ಸುತ್ತು ಬರುತ್ತಿದೆ. ಕೈ ಗಟ್ಟಿಯಾಗಿ ಹಿಡಿದುಕೊಳ್ಳಿ ಎಂದು ಬಾಳೆಲೆ ವಿಜಯಲಕ್ಷ್ಮಿ ಪ.ಪೂ.ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗಕ್ಕೆ ತೆರಳುತ್ತಿದ್ದ ದಿನೇಶ್ ಹಾಗೂ ಕೂಲಿ ಕಾರ್ಮಿಕ ಪೆಮ್ಮುವನ್ನು ಸಹಾಯಕ್ಕೆ ಕರೆಯುತ್ತಾರೆ.
ಈ ಹಂತದಲ್ಲಿ ಇಬ್ಬರೂ ಆಶಾ ಸಹಾಯಕ್ಕೆ ಧಾವಿಸುತ್ತಾರೆ. ಇದರಿಂದ ವಿಚಲಿತಗೊಂಡ ಜಗದೀಶ್ ಮೊದಲಿಗೆ ಮತ್ತೊಂದು ಗುಂಡನ್ನು ದಿನೇಶ್‍ಗೆ ಗುರಿಯಿರಿಸುತ್ತಾನೆ. ಚಿಲ್ಲು ದಿನೇಶನ ಬಲಗೈ ಹೊಕ್ಕುತ್ತವೆ. ಈ ಹಂತದಲ್ಲಿಯೇ ಮತ್ತೊಂದು ಗುಂಡನ್ನು ಆಶಾ ಹೊಟ್ಟೆ ಭಾಗಕ್ಕೆ ಬೆನ್ನ ಹಿಂದಿನಿಂದ ಹಾರಿಸುತ್ತಾನೆ. ಮತ್ತೊಂದು ಗುಂಡು ಗುರಿ ತಪ್ಪುತ್ತದೆ ಹಾಗೂ ಪೆಮ್ಮುವಿನ ಎಡತೊಡೆಯ ಭಾಗಕ್ಕೆ ತಗುಲುತ್ತದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಹಂತಕ ಜಗದೀಶ್ ಒಟ್ಟು ನಾಲ್ಕು ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಇದೆಲ್ಲವೂ ಕ್ಷಣಮಾತ್ರದಲ್ಲಿ ನಡೆದುಹೋಗುವ ಘಟನೆ. ಆಶಾ ಟೀಚರ್ ಕೆಲವೇ ಕ್ಷಣದಲ್ಲಿ ಕುಸಿದು ಬೀಳುತ್ತಾರೆ.ಇಹಲೋಕ ತ್ಯಜಿಸುತ್ತಾರೆ. ಈ ವೇಳೆ ರಸ್ತೆಯ ಗುಂಡಿಯಲ್ಲಿ ಮಳೆಯಿಂದ ತುಂಬಿದ್ದ ನೀರನ್ನೇ ಇಬ್ಬರೂ ಸೇರಿ ಆಶಾ ಅವರಿಗೆ ಕುಡಿಸುತ್ತಾರೆ. ದಿಢೀರ್ ಘಟನೆಯಿಂದ ದಿನೇಶ್ ಜೀವಾಪಾಯದಿಂದ ಓಟಕ್ಕೀಳುವದಾಗಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾನೆ. ಇತ್ತ ಗಾಯಾಳು ಯುವಕರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗುತ್ತದೆ. ಹಂತಕ ಜಗದೀಶ್‍ನ ಗುಂಡೇಟು ತಗುಲಿದರೂ ಕಾಲೇಜು ವಿದ್ಯಾರ್ಥಿ ದಿನೇಶ್ ಹಾಗೂ ಕಾರ್ಮಿಕ ಪೆಮ್ಮು (45) ವಿಗೆ ಮೊದಲು ಗೊತ್ತಾಗುವದೇ ಇಲ್ಲ. ನಂತರವೇ ಇಬ್ಬರಿಗೂ ನೋವಿನ ಅರಿವಾಗುತ್ತದೆ.
ಈ ಹಂತದಲ್ಲಿ ಇಬ್ಬರು ಗಾಯಾಳುಗಳನ್ನು ಮೊದಲಿಗೆ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ, ನಂತರ ಗೋಣಿಕೊಪ್ಪಲು ಆರೋಗ್ಯ ಕೇಂದ್ರ ಹಾಗೂ ವೀರಾಜಪೇಟೆ ತಾಲೂಕು ಆಸ್ಪತ್ರೆಗೆ ಕರೆತರಲಾಗುತ್ತದೆ. ವೀರಾಜಪೇಟೆ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ನೋವು ನಿವಾರಕ ಚುಚ್ಚುಮದ್ದು ನೀಡಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಮಧ್ಯಾಹ್ನ 2 ಗಂಟೆಯ ನಂತರ ಕರೆದೊಯ್ಯಲಾಗುತ್ತದೆ. ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯ ಡಾ.ನವೀನ್ ಅವರು, ಮದ್ದುಗುಂಡುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವ ಅಗತ್ಯವಿಲ್ಲ.ಹಾಗೇನಾದರೂ ತೆಗೆಯಬೇಕಾದರೆ ಮುಂದಿನ ಗುರುವಾರ(ತಾ.20)ಬನ್ನಿ. ಈಗ ಮನೆಗೆ ಹೋಗಬಹುದು ಎಂದು ಶುಕ್ರವಾರ(ತಾ.15) ಅಪರಾಹ್ನ ವಾಪಾಸ್ಸು ಮನೆಗೆ ಕಳುಹಿಸುತ್ತಾರೆ ಎಂದು ಗಾಯಾಳುಗಳು ಹಾಗೂ ದಿನೇಶ್ ಸಹೋದರ ಪ್ರೀತಮ್ ‘ಶಕಿ’್ತಗೆ ಮಾಹಿತಿ ನೀಡಿದ್ದಾರೆ. ಈ ಹಂತದಲ್ಲಿ ದಿನೇಶ್‍ನ ಗುಂಡೇಟು ತಗುಲಿದ ಕೈ ಹಾಗೂ ಪೆಮ್ಮುವಿನ ಕಾಲಿನ ಸ್ನಾಯು ಭಾಗದಲ್ಲಿ ಅಪಾರ ನೋವು ಕಾಣಿಸಿಕೊಂಡ ಹಿನ್ನೆಲೆ ಇಂದು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ಮತ್ತೆ ಬಾಳೆಲೆ ಮಾಜಿ ಗ್ರಾ.ಪಂ.ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ ಅವರ ಸೂಚನೆ ಮೇರೆ ಇಬ್ಬರು ದಾಖಲಾಗುತ್ತಾರೆ. ಈ ಹಂತದಲ್ಲಿ ಸೂಕ್ತ ಶಸ್ತ್ರ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸುವ ಪ್ರಯತ್ನವೂ ನಡೆಯುತ್ತದೆ.
ಗಾಯಾಳುಗಳು ಆರ್ಥಿಕವಾಗಿ ತೀವೃ ಹಿಂದುಳಿದಿದ್ದು ವಾಸ್ತವ ಸ್ಥಿತಿಯನ್ನು ‘ಶಕ್ತಿ’ ಮೂಲಕ ಪೆÇಲೀಸ್ ಅಧೀಕ್ಷಕಿ ಡಾ.ಸುಮನ್ ಅವರಿಗೆ ವಿವರಿಸಿದ ನಂತರ ಎಸ್.ಪಿ.ಅವರು ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಅವರಲ್ಲಿ ಚರ್ಚಿಸಿದ ನಂತರ ಇದೀಗ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿಯೇ ಸೂಕ್ತ ಶಸ್ತ್ರಚಿಕಿತ್ಸೆ ನೀಡುವ ಹಾಗೂ ಗಾಯಾಳುಗಳ ಕೈ ಹಾಗೂ ಕಾಲುಗಳಲ್ಲಿ ಹೊಕ್ಕಿರುವ ಮದ್ದುಗುಂಡು (ಚಿಲ್ಲು) ಹೊರತೆಗೆಯಲಾಗುವದು ಎಂದು ಭರವಸೆ ದೊರೆತಿದೆ.
ತಾ.17 ರಂದು (ಇಂದು) ಮಡಿಕೇರಿ ಮೆಡಿಕಲ್ ಕಾಲೇಜು ನಿರ್ದೇಶಕರ ಸಹಕಾರದೊಂದಿಗೆ ಇಬ್ಬರು ಗಾಯಾಳುಗಳಿಗೆ ಶಸ್ತ್ರಚಿಕಿತ್ಸೆ ಹಾಗೂ ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಅವರ ಸಹಕಾರದೊಂದಿಗೆ ಬೆಳಿಗ್ಗೆ 9.30 ಗಂಟೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಮತ್ತೆ ದಾಖಲಿಸಲು ಡಿಎಚ್‍ಒ ಡಾ.ಮೋಹನ್ ನಿರ್ದೇಶನ ನೀಡಿರುವದಾಗಿ ತಿಳಿದುಬಂದಿದೆ.
ಇತ್ತ ಜಿಲ್ಲಾ ಪೆÇಲೀಸ್ ಅಧೀಕ್ಷಕಿ ಡಾ.ಸುಮನ್ ಪಣ್ಣೇಕರ್ ಅವರು ಕೃತ್ಯಕ್ಕೆ ಬಳಸಿರುವ ಒಂಟಿನಳಿಕೆಯ ಕೋವಿ ಇತ್ತೀಚೆಗೆ ಖರೀದಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವದಾಗಿ ‘ಶಕ್ತಿ’ ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಿರುವ ಬಂದೂಕು ಹಂತಕ ಜಗದೀಶ್ ಹೆಸರಿನಲ್ಲಿರುವ ಜಮ್ಮಾ ಕೋವಿ ಎಂದು ಮಾಹಿತಿ ನೀಡಲಾಗಿತ್ತು. -ಟಿ.ಎಲ್.ಶ್ರೀನಿವಾಸ್