ಶನಿವಾರಸಂತೆ, ಜೂ. 16: ಸಮೀಪದ ಗುಡುಗಳಲೆ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಗೋಪಾಲಪುರ ಗ್ರಾಮದ ಬದ್ರಿಯಾ ಅರೇಬಿಕ್ ಮದರಸದಲ್ಲಿ ಅಧ್ಯಯನ ವರ್ಷದ ಮಿಹ್ ರಜಾನುಲ್ ಬಿದಾಯ ಪ್ರಾರಂಭೋತ್ಸವ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಸೀದಿ ಆಡಳಿತ ಮಂಡಳಿ ಉಪಾಧ್ಯಕ್ಷ ಶೇಖಬ್ಬ ಹಾಜಿ (ಚೆರಿಯಾಕ) ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಅಧ್ಯಾಪಕ ಹಸೈನಾರ್ ಮುಸ್ಲಿಯಾರ್ ಕಾಜೂರು, ಪ್ರಮುಖರಾದ ಇಬ್ರಾಹಿಂ, ಫಾರೂಕ್ ಮೌಲವಿ, ನಾಸಿಕ್ ಆರ್ಮಿ, ಅಬ್ದುಲ್ ರಜಾಕ್ ಉಪಸ್ಥಿತರಿದ್ದರು. ನೂತನ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸ್ವಾಗತಿಸಲಾಯಿತು.