ಮಡಿಕೇರಿ, ಜೂ. 15: ಮಳೆಗಾಲದಲ್ಲಿ ಮಲೆನಾಡು ಜಿಲ್ಲೆ ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಲ್ಲಿ ಕೊಡೆ ಹಿಡಿದು ನಡೆಯಬೇಕಾದುದು ಮಳೆಯಿಂದ ರಕ್ಷಣೆಗೆ ಅಲ್ಲ; ಬಿಸಿಲಿನ ಶಾಖವನ್ನು ತಡೆಗಟ್ಟಲು ಮಹಿಳೆಯರು ಕೊಡೆ ಹಿಡಿದು ನಡೆದರು. ಮಳೆಗಾಗಿ ತಂದಿದ್ದ ಕೊಡೆಗಳನ್ನು ಬಿಸಿಲ ಬೇಗೆ ತಡೆಯಲು ಬಳಸಿಕೊಂಡರು.
ಶನಿವಾರ ಮಧ್ಯಾಹ್ನ 3.30 ರ ವೇಳೆ “ಶಕ್ತಿ” ಕ್ಯಾಮರಾಕ್ಕೆ ಸಿಕ್ಕಿದ ಬಿಸಿಲಿನ ಝಳದ ಚಿತ್ರದಲ್ಲಿ ಸ್ಪಷ್ಟ ಚಿತ್ರಣವಿದೆ. ಆಗಸದಲ್ಲಿ ಬಿಳಿ ಮೋಡ, ಸೂರ್ಯನ ರಶ್ಮಿ ಗೋಚರವಾಯಿತು.