*ಗೋಣಿಕೊಪ್ಪಲು, ಜೂ. 14 : ಬಸ್ಸಿಗಾಗಿ ಕಾಯುತ್ತಿದ್ದ ಶಿಕ್ಷಕಿಯ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಕೊಲೆಗೈದು, ತಾನು ಸಹ ಅದೇ ಕೋವಿಯಿಂದ ಗುಂಡು ಹಾರಿಸಿ ಕೊಂಡು ಆತ್ಮಹತ್ಯೆ ಮಾಡಿ ಕೊಂಡ ಅಮಾನುಷ ಕೃತ್ಯ ಪೆÇನ್ನಂಪೇಟೆ ಪೆÇಲೀಸ್ ಠಾಣೆ ವ್ಯಾಪ್ತಿಯ ಬಾಳೆಲೆಯಲ್ಲಿ ನಡೆದಿದೆ. ಬಾಳೆಲೆ ಪೆÇಲೀಸ್ ಉಪಠಾಣೆ ಮುಂಭಾಗದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬಾಳೆಲೆ ನಿವಾಸಿ ಗೋಣಿಕೊಪ್ಪಲು ಲಯನ್ಸ್ ಶಾಲೆಯ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ (45) ಕೊಲೆಯಾದ ದುರ್ದೈವಿ. ಮಾಚಿಮಾಡ ಜಗದೀಶ್ (55) ಮಹಿಳೆಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ದುಷ್ಕರ್ಮಿ. ಶುಕ್ರವಾರ ಬೆಳಿಗ್ಗೆ 8:15ಕ್ಕೆ ತನ್ನ ಮನೆಯಿಂದ ಗೋಣಿಕೊಪ್ಪಲುವಿನ ಲಯನ್ಸ್ ಶಾಲೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭ ಕಾಫಿ ತೋಟದಿಂದ ದುಷ್ಕರ್ಮಿ ಒಂಟಿ ನಳಿಕೆ ಕೋವಿಯಿಂದ ಗುಂಡು ಹಾರಿಸಿದ್ದಾನೆ. ಈ ಸಂದರ್ಭ ಆದೇಂಗಡ ಆಶಾ ಕಾವೇರಮ್ಮ ಅವರ ಬಲಗೈ ಭಾಗದ ಪಕ್ಕೆಲುಬು ಮತ್ತು ತಲೆ ಭಾಗಕ್ಕೆ
(ಮೊದಲ ಪುಟದಿಂದ) ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡು ಹಾರಿಸಿದ ದುಷ್ಕರ್ಮಿ ಜಗದೀಶ್ ಆಶಾ ಕಾವೇರಮ್ಮ ಮೃತಪಟ್ಟ ಸ್ಥಳದಿಂದ 20 ಅಡಿ ದೂರದ ಕಾಫಿ ತೋಟದಲ್ಲಿ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯಲ್ಲಿ ಅದೇ ಮಾರ್ಗವಾಗಿ ಶಾಲೆಗೆ ತೆರಳುತ್ತಿದ್ದ, ಸ್ಥಳೀಯ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ ವೈ.ಕೆ. ದಿನೇಶ್ ಹಾಗೂ ಸ್ಥಳೀಯ ತೋಟ ಕಾರ್ಮಿಕ ಪಿ.ಬಿ. ಪೆಮ್ಮಿ ಅವರ ಮೇಲೆಯೂ ಗುಂಡು ತಗುಲಿದೆ. ವೈ.ಕೆ. ದಿನೇಶ್ ಬಲಗೈಯ ರಟ್ಟೆ ಭಾಗಕ್ಕೆ, ಬೆರಳಿಗೆ ಮತ್ತು ಪೆಮ್ಮಿಯ ಕೈಯ ಹಿಮ್ಮುಡಿಗೆ ಗುಂಡಿನ ಚಿಲ್ಲುಗಳು ತಗುಲಿ ಗಾಯಗೊಂಡಿದ್ದಾರೆ. ದುಷ್ಕರ್ಮಿ ಶಿಕ್ಷಕಿಯ ಮೇಲೆ ಗುಂಡು ಹಾರಿಸಿದಾಗ ಭಯಗೊಂಡ ಶಿಕ್ಷಕಿ ಕಿರುಚಿಕೊಂಡು ಸಮೀಪದಲ್ಲೇ ಬರುತ್ತಿದ್ದ ದಿನೇಶ್ ಹಾಗೂ ಪೆಮ್ಮಿ ಇವರನ್ನು ಕರೆದು ರಕ್ಷಿಸಿ ಎಂದು ಕೂಗಿಕೊಂಡಿದ್ದಾರೆ. ರಕ್ಷಣೆಗೆ ಧಾವಿಸಿದಾಗ ಇವರ ಮೇಲೆ ಗುಂಡು ತಗುಲಿದೆ ಎಂದು ಪೆÇಲೀಸ್ ವರದಿಯಿಂದ ತಿಳಿದು ಬಂದಿದೆ.
ಶಿಕ್ಷಕಿ ಆಶಾ ಕಾವೇರಮ್ಮ ಹಾಗೂ ಜಗದೀಶ್ ಪರಿಚಯಸ್ಥರಾಗಿದ್ದು, ಕಳೆದ ಎರಡು ವರ್ಷಗಳಿಂದ ಇಬ್ಬರ ನಡುವಿನಲ್ಲಿ ಸ್ನೇಹ ಬಿರುಕು ಬಿಟ್ಟಿತ್ತು. ಇಬ್ಬರಲ್ಲಿ ಇದ್ದಂತಹ ಲೇವಾದೇವಿ ವಹಿವಾಟುಗಳೇ ಸ್ನೇಹದ ಬಿರುಕಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕಿ ಆಶಾಳ ಸ್ನೇಹವನ್ನು ಸಂಪಾದಿಸಲು ಜಗದೀಶ್ ‘ಬ್ಲ್ಯಾಕ್ ಮೇಲ್’ ತಂತ್ರವನ್ನು ಬಳಸಿಕೊಂಡಿದ್ದ. ಆಕೆಯ ಫೆÇೀಟೋವನ್ನು ಬಳಸಿ ನೀಲಿ ಚಿತ್ರ ತಾರೆಯ ಫೆÇೀಟೋದೊಂದಿಗೆ ಹೋಲಿಕೆ ಮಾಡಿ ‘ಬ್ಲ್ಯಾಕ್ಮೇಲ್’ ಮಾಡುತ್ತಿದ್ದ, ಈ ವಿಚಾರವಾಗಿ ಗೋಣಿಕೊಪ್ಪಲು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಜಗದೀಶ್ ಸೆರೆಮನೆ ವಾಸ ಕೂಡ ಅನುಭವಿಸಿದ್ದ. ಇದನ್ನೇ ಜಿದ್ದಾಗಿ ತೆಗೆದುಕೊಂಡ ಆರೋಪಿ ಜೈಲಿನಿಂದ ಬಂದ ನಂತರ ‘ನಿನ್ನನ್ನು ಕೊಲ್ಲುತ್ತೇನೆ’ ಎಂದು ಬೆದರಿಸಿದ್ದ. ಈ ಬಗ್ಗೆಯೂ ಪೆÇಲೀಸ್ ದೂರು ದಾಖ ಲಾಗಿತ್ತು. ಈತನ ಈ ವರ್ತನೆಯಿಂದ ಬೆದರಿದ ಶಿಕ್ಷಕಿ ತನ್ನ ಮನೆಯ ಸುತ್ತಲು ಸಿ.ಸಿ. ಕ್ಯಾಮರಾ ಕಣ್ಗಾವಲನ್ನು ಅಳವಡಿಸಿದ್ದರು. ಈಕೆಯ ನಿತ್ಯ ಚಲನವಲನಗಳನ್ನು ಮೊದಲೇ ಅರಿತಿದ್ದ ದುಷ್ಕರ್ಮಿ ಜಗದೀಶ್ ಇಂದು ಮುಂಜಾನೆ ಶಿಕ್ಷಕಿಯ ತೋಟದಲ್ಲೇ ಹೊಂಚು ಹಾಕಿ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ.
ಈ ಸುದ್ದಿಯು ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಸುತ್ತ ಮುತ್ತಲಿನ ಗ್ರಾಮದ ಜನತೆ ತಂಡೋಪತಂಡವಾಗಿ ಆಗಮಿಸಿ ಮೃತ ದೇಹವನ್ನು ವೀಕ್ಷಿಸಿದರು. ಶಿಕ್ಷಕಿ ಆಶಾ ಕಾವೇರಮ್ಮನವರು ಪತಿಯನ್ನು ಕಳೆದುಕೊಂಡು ಹತ್ತು ವರ್ಷಗಳಾಗಿತ್ತು. ತಮ್ಮ ಕಾಫಿ ತೋಟವನ್ನು ಕಾರ್ಮಿಕರ ಸಹಕಾರದಿಂದ ನೋಡಿಕೊಂಡು ಗೋಣಿಕೊಪ್ಪಲುವಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸ ಲಾಯಿತು. ಶಿಕ್ಷಕಿ ಮೃತ ಪಟ್ಟ ಹಿನ್ನೆಲೆ ಯಲ್ಲಿ ವಿದ್ಯಾಸಂಸ್ಥೆಯು ಶ್ರದ್ಧಾಂಜಲಿ ಅರ್ಪಿಸಿ ಶಾಲೆಗೆ ರಜೆ ಘೋಷಿಸಿತು.
ದುರ್ದೈವಿ ಆಶಾ ಕಾವೇರಮ್ಮ ಬಾಳೆಲೆ ಗ್ರಾಮದಲ್ಲಿ ಉತ್ತಮ ಜೀವನ ನಡೆಸುತ್ತಿದ್ದರು. ಇವರಿಗೆ ಎರಡು ಹೆಣ್ಣು ಮಕ್ಕಳಿದ್ದು, ಒಬ್ಬಾಕೆ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ, ಮತ್ತೊಬ್ಬಳು ಅಂತಿಮ ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆಶಾ ಕಾವೇರಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಲಯನ್ಸ್ ಸಂಸ್ಥೆಯಲ್ಲಿ ಉತ್ತಮ ಶಿಕ್ಷಕಿ ಎಂದು ಹೆಸರುಗಳಿಸಿದ್ದರು. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದು, ಶಿಸ್ತು ಹಾಗೂ ಪಠ್ಯ ಚಟುವಟಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದರು ಮತ್ತು ವಿದ್ಯಾರ್ಥಿಗಳೊಂದಿಗೆ ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿದ್ದರು ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.
ಕಂಬನಿ : ಶಿಕ್ಷಕಿ ಮೃತಪಟ್ಟ ಸುದ್ದಿಯನ್ನು ತಿಳಿಯುತ್ತಿದ್ದಂತೆ ಆಕೆಯ ಶಿಶ್ಯವೃಂದದವರು ಘಟನೆ ನಡೆದ ಸ್ಥಳಕ್ಕೆ ಮತ್ತು ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಪಾರ್ಥಿವ ಶರೀರವನ್ನು ನೋಡಿ ಕಂಬನಿ ಮಿಡಿದರು.
ಘಟನೆಯ ಸ್ಥಳಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ವೀರಾಜಪೇಟೆ ಡಿ.ವೈ.ಎಸ್.ಪಿ. ನಾಗಪ್ಪ, ಗೋಣಿಕೊಪ್ಪಲು ವೃತ್ತನಿರೀಕ್ಷಕ ಬಿ.ಎಸ್. ಶ್ರೀಧರ್, ಪೆÇನ್ನಂಪೇಟೆ ಠಾಣಾಧಿಕಾರಿ ಮಹೇಶ್, ಗೋಣಿ ಕೊಪ್ಪಲು ಠಾಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
- ಚಿತ್ರ-ವರದಿ : ಎನ್.ಎನ್. ದಿನೇಶ್, ಹೆಚ್.ಕೆ. ಜಗದೀಶ್, ಸುದ್ದಿಪುತ್ರ