ಕರಿಕೆ: ಸಂಪಾಜೆ ವಲಯ ಅರಣ್ಯ ಇಲಾಖೆ ಹಾಗೂ ಸಂಪಾಜೆ ಮತ್ತು ಪೆರಾಜೆ ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದಲ್ಲಿ ಹಸಿರು ಕರ್ನಾಟಕ ಯೋಜನೆಯಡಿಯಲ್ಲಿ ವನಮಹೋತ್ಸವ ಹಾಗೂ ಬೀಜದುಂಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪರಾಜೆ ಕುಂಬಳಚೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಚೆದ್ಕಾರ್, ಅಭಿವೃದ್ಧಿ ಅಧಿಕಾರಿ ಉಷಾರಾಣಿ, ಪೆರಾಜೆ ಅಭಿವೃದ್ಧಿ ಅಧಿಕಾರಿ ಪ್ರಭು, ಸಂಪಾಜೆ ಉಪವಲಯಾರಣ್ಯಾಧಿಕಾರಿ ವಿಜೇಂದ್ರ ಕುಮಾರ್, ಸಿಬ್ಬಂದಿ ಹಾಗೂ ಪಂಚಾಯಿತಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಸಿದ್ದಾಪುರ: ಸಿದ್ದಾಪುರದ ಬಿ.ಜಿ.ಎಸ್. ಪಬ್ಲಿಕ್ ಶಾಲೆಯಲ್ಲಿ ಪರಿಸರ ದಿನದ ಅಂಗವಾಗಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಗಿಡ ನೆಟ್ಟರು. ಈ ಸಂದರ್ಭ ಸಂಸ್ಥೆಯ ವ್ಯವಸ್ಥಾಪಕ ಸುಧಾಕರ್, ಮುಖ್ಯ ಶಿಕ್ಷಕರು, ಶಿಕ್ಷಕರು ಇದ್ದರು.ವೀರಾಜಪೇಟೆ: ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ವಿದ್ಯಾಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಮದಲೈಮುತ್ತು ಶಾಲೆಯ ಆವರಣದಲ್ಲಿ ಗಿಡ ನೆಟ್ಟು ಬಳಿಕ ಮಾತನಾಡಿ, ಪ್ರಕೃತಿ ಉಳಿಸಿ ಬೆಳೆಸುವದರಿಂದ ಉತ್ತಮ ಪರಿಸರವನ್ನು ಕಾಣಬಹುದು ಎಂದರು.ಶನಿವಾರಸಂತೆ: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸ್ವಚ್ಛಮೇವ ಜಯತೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್, ಕಾರ್ಯದರ್ಶಿ ವೇಣುಗೋಪಾಲ್, ಸದಸ್ಯೆ ಸುಮತಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಗೋಣಿಕೊಪ್ಪ ವರದಿ: ಬಾಳಾಜಿ ಗ್ರಾಮದ ಭದ್ರಕಾಳಿ ದೇವರ ಕಾಡಿನಲ್ಲಿ ಜೆಸಿಐ ಪೊನ್ನಂಪೇಟೆ ಗೋಲ್ಡನ್, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ, ಕೊಡಗು ಮೋಡೆಲ್ ಫಾರೆಸ್ಟ್ ವತಿಯಿಂದ ಸುಮಾರು 250 ಗಿಡಗಳನ್ನು ನೆಡಲಾಯಿತು. 5 ಎಕರೆ ಜಾಗದಲ್ಲಿ ಕಾಡು ಮರ, ಔಷಧಿ ಗುಣಗಳುಳ್ಳ ಗಿಡಗಳನ್ನು ನೆಡಲಾಯಿತು. ಗ್ರಾಮದ ಸುಮಾರು 100 ಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಗಿಡ ನೆಟ್ಟರು. ಈ ಸಂದರ್ಭ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ಕೊಡಗು ಮೋಡೆಲ್ ಫಾರೆಸ್ಟ್ ಕಾರ್ಯದರ್ಶಿ ಶರಿ ಸುಬ್ಬಯ್ಯ, ಯುಕೋ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಪಾಲ್ಗೊಂಡಿದ್ದರು.ಸಿದ್ದಾಪುರ: ಸಿದ್ದಾಪುರ ಪೊಲೀಸ್ ಠಾಣೆಯ ಆವರಣದಲ್ಲಿ ಮಡಿಕೇರಿ ಉಪವಿಭಾಗದ ಡಿ.ವೈ.ಎಸ್.ಪಿ. ಸುಂದರ್ ರಾಜ್ ಗಿಡ ನೆಡುವದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭ ಠಾಣಾಧಿಕಾರಿ ಮಹೇಶ್, ಸಹಾಯಕ ಠಾಣಾಧಿಕಾರಿ ರಾಜ, ಮುಖ್ಯ ಪೇದೆಗಳಾದ ಪಿ.ಟಿ. ಶ್ರೀನಿವಾಸ್, ಬೆಳ್ಯಪ್ಪ, ಸಿಬ್ಬಂದಿ ಹಾಗೂ ಉದ್ಯಮಿ ರಾಜೇಂದ್ರ ಸಿಂಗ್ ಇದ್ದರು.