ಗೋಣಿಕೊಪ್ಪ ವರದಿ, ಜೂ. 14: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಸುಮಾರು 72 ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡರು. ಕಂಪೆನಿಗಳಿಗೆ ನಡೆದ ಆಯ್ಕೆಯಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಟಿಸಿಎಸ್, ರೋಬ್‍ಸಾಫ್ಟ್, ಇನ್ಫೋಸಿಸ್, ಎಬಿಸಿ, ಮಮೆಂಟೊ, ಸೆಕ್ರ್ಯುನಿಕ್ಸ್, ವಿಶಾಲ್ ಇಂಟನ್ಯಾಷನಲ್, ಕ್ಯೂಸ್ಪೈಡರ್ಸ್, ಸಿಎಇಡಿ, ಆರ್‍ಇಇ ಮೈಸೂರು, ಸಂಕಲ್ಪ್ ಡೆವಲಪರ್ಸ್, ಕಾಲ್ ಇನ್ ಐಟಿ ಸಲ್ಯೂಷನ್ಸ್, ಕಾದಿಲರ್, ವಾಲ್ವೋ, ಪಾತ್‍ಫ್ರಂಟ್ ಕಂಪೆನಿಗಳು ಆಯ್ಕೆ ನಡೆಸಿದವು. ಇದಲ್ಲದೆ 17 ವಿದ್ಯಾರ್ಥಿಗಳನ್ನು ಎಸ್‍ಎಪಿ ಇಂಡಿಯಾ, ಬೋಲ್ಟ್ ಲೋಟ್ ಕಂಪೆನಿಗಳು ಇಂಟರ್‍ಶಿಪ್‍ಗೆ ಪಡೆದುಕೊಂಡಿತು. ಈ ಸಂದರ್ಭ ಕಾಲೇಜು ಪ್ರಾಂಶುಪಾಲೆ ಡಾ. ಪಿ.ಸಿ. ಕವಿತಾ, ಪ್ಲೇಸ್‍ಮೆಂಟ್ ಅಧಿಕಾರಿ ಕೋಟ್ರಂಗಡ ಸುಬ್ಬಯ್ಯ ಇದ್ದರು.