ಗೋಣಿಕೊಪ್ಪಲು, ಜೂ.14: ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಕಿ ಕ್ರೀಡೆಗೆ ಆಯ್ಕೆಗೊಂಡಿದ್ದು 18 ವಿದ್ಯಾರ್ಥಿಗಳು ಜಿಲ್ಲೆಯಿಂದ ಪ್ರಯಾಣ ಬೆಳೆಸಿದರು. 16 ವಯಸ್ಸಿನ ವಿದ್ಯಾರ್ಥಿಗಳು ಚತ್ತೀಸ್ಘಡದ ಬಿಲ್ಲಾಸ್ಪುರದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡೆಯಲ್ಲಿ ಭಾಗವಹಿಸಲಿದ್ದು ಕ್ರೀಡೆಯು ಜೂನ್ 17ರಿಂದ ಜುಲೈ.02ರವರೆಗೆ ನಡೆಯಲಿದೆ. ಕೂಡಿಗೆ ಕ್ರೀಡಾ ವಸತಿ ಶಾಲೆಯ ಎರಡು ವಿದ್ಯಾರ್ಥಿಗಳು ಬೆಂಗಳೂರಿನ ಡಿವೈಇಎಸ್ನ ಐದು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 18 ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಕಾಮೇಶ್, ಯಶ್ವಂತ್, ಗೌರವ್, ಉಜ್ವಲ್ ಅಪ್ಪಚ್ಚು, ದರ್ಶನ್ ಪೊನ್ನಣ್ಣ, ನಿಶಿಕ್ ನಾಚಪ್ಪ, ಪ್ರಥ್ವಿ ಚಂದ್ರ, ದಿವಾನ್ ಸುಬ್ಬಯ್ಯ, ಧನುಷ್ ಕಾವೇರಪ್ಪ, ಆರ್ಯಮುತ್ತಪ್ಪ, ಧನಿಕ್, ಮೌರ್ಯ ತಿಮ್ಮಯ್ಯ, ವಿನ್ಯಾಸ್, ಕಿರಣ್ ಕುಮಾರ್, ಬಿಪಿನ್, ಚಂಗಪ್ಪ, ಶ್ರೇಯಸ್ ನಂಜುಂಡ, ಹಾಗೂ ವಚನ್ ಸ್ಥಾನ ಪಡೆದಿದ್ದು ಮೂಕಚಂಡ ನಾಚಪ್ಪ ಕೋಚ್ ಆಗಿ ಜೆಸಿಬಿ ವಿನೋದ್ ಕುಮಾರ್ ಅಸಿಸ್ಟೆಂಟ್ ಕೋಚ್ ಆಗಿ ಬುಟ್ಟಿಯಂಡ ಚಂಗಪ್ಪ ಮ್ಯಾನೆಜರ್ ಆಗಿ ವಿದ್ಯಾರ್ಥಿಗಳೊಂದಿಗೆ ತೆರಳಿದರು.
ವಸತಿ ನಿಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನೆಲ್ಲಚಂಡ ಕಿರಣ್ ಕಾರ್ಯಪ್ಪ ಜಿಲ್ಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಬೇಕು. ಇಲಾಖೆಯು ತಮ್ಮ ಕ್ರೀಡಾ ಪ್ರತಿಭೆಯನ್ನು ಹೊರಸೂಸಲು ವಿಫಲ ಅವಕಾಶ ಕಲ್ಪಿಸಿದೆ. ಇದರ ಪ್ರಯೋಜನ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಹಾಕಿ ಕೂರ್ಗ್ನ ಖಜಾಂಚಿ ಐನಂಡ ಲಾಲ, ಟೆಕ್ನಿಕಲ್ ಚೇರ್ಮನ್ ಪವನ್ ಹಾಕಿ ತರಬೇತಿದಾರರಾದ ಕುಪ್ಪಂಡ ಸುಬ್ಬಯ್ಯ, ಬುಟ್ಟಿಯಂಡ ಚಂಗಪ್ಪ, ಜೆಸಿಬಿ ವಿನೋದ್ ಕುಮಾರ್, ಮೂಕಚಂಡ ನಾಚಪ್ಪ, ವಾರ್ಡನ್ ಮಂಜುನಾಥ್, ಉಪಸ್ಥಿತರಿದ್ದರು.
-ಹೆಚ್.ಕೆ.ಜಗದೀಶ್