ಶ್ರೀಮಂಗಲ, ಜೂ. 14: ವ್ಯಾಸಂಗದಲ್ಲಿ ತೆಗೆದುಕೊಳ್ಳುವ ಅಂಕ ಒಬ್ಬ ವ್ಯಕ್ತಿಯ ಸಮಗ್ರ ಅರ್ಹತೆಗೆ ಮಾನದಂಡವಾಗುವದಿಲ್ಲ. ನಂತರದಲ್ಲಿ ಯಾವ ವಿಚಾರವನ್ನು ಗಟ್ಟಿಯಾಗಿ ಹಿಡಿದು ಸಾಧನೆ ಮಾಡುತ್ತಾರೆ ಎಂಬವದು ಮುಖ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ವ್ಯಾಸಂಗದಲ್ಲಿ ಹಿಂದೆ ಬಿದ್ದರೂ ದೃತಿಗೆಡಬೇಕಿಲ್ಲ, ಇದು ಜೀವನದ ಸಾಧನೆ ಮಾಡಲು ತೊಡಕಾಗುವದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅಭಿಪ್ರಾಯಪಟ್ಟರು. ಪೆÇನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಿಕ್ಷಣದಲ್ಲಿ ದೊಡ್ಡಮಟ್ಟದ ಅಂಕ ಪಡೆದುಕೊಳ್ಳದಿದ್ದರೂ ನಮಗೆ ದೊರೆಯುವ ಅವಕಾಶದಲ್ಲಿ ಶ್ರದ್ಧೆಯಿಂದ ಕೆಲಸ ಮಾಡುವ ಮೂಲಕ ಜೀವನದಲ್ಲಿ ಸಾಧನೆ ಮಾಡಬಹುದು. ದೇಶದ ಇಷ್ಟು ಜನಸಂಖ್ಯೆಯಲ್ಲಿ 31 ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಲ್ಲಿ ನಾನು ಒಬ್ಬ ಎಂಬವದು ನನಗೆ ಹೆಮ್ಮೆ ಇದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶನಾಗಿ ನೇಮಕನಾಗಿರುವ ನಾನು ನನ್ನ ತವರು ಬಯಸುವಂತೆ ಉತ್ತಮ ಹೆಸರು ತರುವದಾಗಿ ಹೇಳಿದರು. ತಂದೆ, ತಾಯಿ ಕಲಿಸಿದ ಸಂಸ್ಕಾರದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ನಿರಂತರ ಶ್ರದ್ಧೆ ಪರಿಶ್ರಮ ಮತ್ತು ಕುಟುಂಬದ ಬೆಂಬಲ ನನಗೆ ಸಹಕಾರಿಯಾಗಿದೆ; ಮೊದಲು ಮನುಷ್ಯನಾಗಿರಬೇಕು ಎಂದು ಹೇಳಿದರು.
2006ನೇ ಇಸವಿಯಲ್ಲಿ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕವಾದ ಸಂದರ್ಭ ಪೆÇನ್ನಂಪೇಟೆ ಕೊಡವ ಸಮಾಜದಿಂದ ಅಭಿನಂದನೆ ಸಲ್ಲಿಸಿ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗುವಂತೆ ಹಾರೈಸಿ ಕಳುಹಿಸಲಾಗಿತ್ತು. ಎಂಬವದನ್ನು ನೆನಪಿಸಿಕೊಂಡ ಅವರು ನಿಮ್ಮ ಆಶೀರ್ವಾದ
(ಮೊದಲ ಪುಟದಿಂದ) ಮತ್ತು ಹಾರೈಕೆ ಇಲ್ಲಿಗೆ ತಲಪಿಸಿದೆ ಎಂದು ಹೇಳಿದರು.
ಧಾರವಾಡದಲ್ಲಿ ನ್ಯಾಯಾಧೀಶ ನಾಗಿದ್ದಾಗ, ಶಿಕ್ಷಣ ಸಂಸ್ಥೆ ಸಮಾರಂಭಕ್ಕೆ ಅತಿಥಿಗಳಾಗಿ ನನ್ನನ್ನು ಸೇರಿದಂತೆ ಇತರ ಗಣ್ಯರನ್ನು ಕರೆಸಲಾಗಿತ್ತು. ಆ ಸಂದರ್ಭ ಇತರ ಮುಖ್ಯ ಅತಿಥಿಗಳನ್ನು ಪರಿಚಯಿಸು ವಾಗ ಹಲವು ತರಗತಿಯಲ್ಲಿ ರ್ಯಾಂಕ್, ಗೋಲ್ಡ್ ಮೆಡಲ್ಗಳ ಪಡೆದ ಬಗ್ಗೆ ಅವರ ಸಾಧನೆಯನ್ನು ಹೇಳಲಾಯಿತು. ನನ್ನ ಪರಿಚಯದಲ್ಲಿ ಕೇವಲ ಹಾಕಿ, ಕ್ರಿಕೆಟ್ ಪಟುವಾಗಿದ್ದರು ಎಂದು ಪರಿಚಯಿಸಲಾಯಿತು. ಈ ಸಂದರ್ಭ ನಾನು ಮಾತನಾಡಿ ರ್ಯಾಂಕ್ ಹಾಗೂ ಗೋಲ್ಡ್ ಮೆಡಲ್ ಪಡೆದವರು ಈ ಶಿಕ್ಷಣ ಸಂಸ್ಥೆಯಲ್ಲಿ ಅತಿ ಹೆಚ್ಚು ಅಂಕ- ರ್ಯಾಂಕ್ ಪಡೆದವರಿಗೆ ಸ್ಪೂರ್ತಿ ಯಾದರೆ, ನನ್ನನ್ನು ಸಾಮಾನ್ಯ ಅಂಕಪಡೆದವರು ಸ್ಪೂರ್ತಿಯಾಗಿ ಪಡೆದುಕೊಳ್ಳ ಬಹುದು ಎಂದು ಹೇಳುವ ಮೂಲಕ ಸಾಮಾನ್ಯ ವಿದ್ಯಾರ್ಥಿಗಳು ಸಹ ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯ ಎಂಬವದನ್ನು ಮಾರ್ಮಿಕವಾಗಿ ನುಡಿದರು.
ಇದಕ್ಕೂ ಮೊದಲು ಪ್ರ್ರಾಸ್ತಾವಿಕ ವಾಗಿ ಮಾತನಾಡಿದ ಪೆÇನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗಿರುವ ಎ.ಎಸ್. ಬೋಪಣ್ಣ ಅವರು ನಮ್ಮ ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ. ಆದ್ದರಿಂದ ಅವರಿಗೆ ಸನ್ಮಾನ ಮಾಡುವ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ಅವರನ್ನು ಹತ್ತಿರದಿಂದ ನೋಡಿ ಅವರೊಂದಿಗೆ ಸಂವಾದ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಾಡಲಾಗಿದೆ. ನ್ಯಾಯಮೂರ್ತಿ ಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವರ ಮನೆಗೆ ತೆರಳಿ ದಾಗ ಸರಳ ಹಾಗೂ ಸೌಜನ್ಯದಿಂದ ತಮ್ಮ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಳ್ಳುವ ಮೂಲಕ ತಮ್ಮ ಸ್ಥಾನಮಾನಕ್ಕೆ ತಕ್ಕದಾದಂತಹ ಘನತೆಯನ್ನು ತೋರಿದರು ಎಂದು ಹೇಳಿದರು.
ಇದೇ ಸಂದರ್ಭ ಪೆÇನ್ನಂಪೇಟೆ ಕೊಡವ ಸಮಾಜದಿಂದ ನ್ಯಾಯ ಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ಅವರ ಪತ್ನಿ ಮೋನ ಮುತ್ತಮ್ಮ ಅವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಅಭಿನಂದಿಸಲಾಯಿತು. ಇವರೊಂದಿಗೆ ಪೆÇನ್ನಂಪೇಟೆ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಪೆÇಕ್ಕಳಿಚಂಡ ಪೂಣಚ್ಚ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೆÇನ್ನಪ್ಪ, ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಗೋಣಿಕೊಪ್ಪಲು ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟೀರ ಶಾಂತು ಪೂಣಚ್ಚ, ಪೆÇನ್ನಂಪೇಟೆ ಕೊಡವ ಸಮಾಜ ರಿಕ್ರೀಯೇಷನ್ ಕ್ಲಬ್ ಅಧ್ಯಕ್ಷ ಚೆಪ್ಪುಡೀರ ಎಂ. ಪೆÇನ್ನಪ್ಪ, ಆಲೀರ ಕುಟುಂಬದ ಪರವಾಗಿ ಎರ್ಮು ಹಾಜಿ, ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ, ಚಿರಿಯಪಂಡ ಕುಟುಂಬದ ಪರವಾಗಿ ರಾಜ ನಂಜಪ್ಪ - ಕಾಶಿಯಪ್ಪ, ಶ್ರೀಮಂಗಲ ನಾಡ್ ಕೊಡವ ಸಮಾಜದ ಪರವಾಗಿ ಎಂ.ಟಿ. ಕಾರ್ಯಪ್ಪ ಅವರು ಗೌರವಾರ್ಪಣೆ ಸಲ್ಲಿಸಿದರು.
ವೇದಿಕೆಯಲ್ಲಿ ಪೆÇನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡೀರ ಪೆÇನ್ನಪ್ಪ, ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೋದಂಡ ಸನ್ನು ಉತ್ತಪ್ಪ, ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್, ಮಾಜಿ ಎಂಎಲ್ಸಿ ಚೆಪ್ಪುಡೀರ ಅರುಣ್ ಮಾಚಯ್ಯ ಹಾಜರಿದ್ದರು.
ಡಾ|| ಕಾಳಿಮಾಡ ಶಿವಪ್ಪ ಮತ್ತು ಚೇಂದಂಡ ಸುಮಿ ಸುಬ್ಬಯ್ಯ, ಕೊಡಗಿನ ಹಿರಿಮೆಯ ಬಗ್ಗೆ ಸಾಹಿತ್ಯ ರಚಿಸಿ ಹಾಡು ಹಾಡಿದರು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಸ್ವಾಗತಿಸಿ, ಪೆÇನ್ನಂಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಪೆÇನ್ನಿಮಾಡ ಎಸ್. ಸುರೇಶ್ ಪರಿಚಯಿಸಿ, ಖಜಾಂಚಿ ಮೂಕಳೇರ ಲಕ್ಷ್ಮಣ್ ವಂದಿಸಿದರು.
- ಹರೀಶ್ ಮಾದಪ್ಪ, ಸುದ್ದಿಪುತ್ರ