ಗೋಣಿಕೊಪ್ಪ ವರದಿ, ಜೂ. 14: ಇಲ್ಲಿನ ಇಗ್ಗುತ್ತಪ್ಪ ಕೊಡವ ಸಂಘದ ಮಹಾಸಭೆ ಕುಕೂನ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಉತ್ತಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಅಜ್ಜಿಕುಟ್ಟೀರ ದೇವಯ್ಯ ವರದಿ ವಾಚಿಸಿದರು. ಖಜಾಂಜಿ ಕರ್ತೂರ ನಾಚಪ್ಪ ಲೆಕ್ಕಪತ್ರ ಮಂಡಿಸಿದರು.

ಸಂಘ ಚಟುವಟಿಕೆಯಲ್ಲಿ ಪಾಲ್ಗೊಳ್ಳದ ಸದಸ್ಯರನ್ನು ಬೈಲಾ ನಿಯಮದಂತೆ ಕೈಬಿಟ್ಟು ನೂತನ ಸದಸ್ಯರನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಯಿತು.

ಸಂಘದ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲು ಸದಸ್ಯರು ಸಲಹೆ ನೀಡಿದರು. ಸದಸ್ಯರು ನೀಡುವ ಹಣದಲ್ಲಿ ಕಟ್ಟಡ ನಿರ್ಮಿಸುವಂತೆ ನಿರ್ಧರಿಸಲಾಯಿತು. ಡಾ. ಕಾಳಿಮಾಡ ಶಿವಪ್ಪ ಮತ್ತು ಚೇಂದಂಡ ಸುಮಿ ಸುಬ್ಬಯ್ಯ ಕೊಡವ ಹಾಡು ಹಾಡಿದರು.

ಈ ಸಂದÀರ್ಭ ಉಪಾಧ್ಯಕ್ಷ ತಿರುನೆಲ್ಲಿಮಾಡ ದೇವಯ್ಯ, ನಿರ್ದೇಶಕರುಗಳಾದ ಕುಪ್ಪಂಡ ಗಣೇಶ್, ಉಳುವಂಗಡ ಕಿಶೋರ್, ಮಂಜು, ನೀಲಾ ದೇವಯ್ಯ, ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು.