ಚೆಟ್ಟಳ್ಳಿ, ಜೂ. 14: ವೀರಾಜಪೇಟೆ ಸಮೀಪದ ಕಡಂಗದಲ್ಲಿ ಮುಸ್ಲಿಂ ಬಾಂಧವರು ಈದುಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಬದ್ರಿಯಾ ಮಸೀದಿಯಲ್ಲಿ ನಡೆದ ಈದ್ ನಮಾಜ್ ನೇತೃತ್ವವನ್ನು ಡಾ. ಸಯ್ಯದ್ ತ್ವಯ್ಯಿಬ್ ತಂಙಲ್ ಜಮಲುಲೈಲಿ ಇವರು ವಹಿಸಿದ್ದರು.

ಮೊಹಿದ್ದೀನ್ ಜುಮಾ ಮಸೀದಿಯಲ್ಲಿ ನಡೆದ ಈದ್ ನಮಾಜ್ ನೇತೃತ್ವವನ್ನು ಮೊಹಿದ್ದೀನ್ ಫೈಝಿ ವಹಿಸಿದ್ದರು.