ಮಡಿಕೇರಿ, ಜೂ. 13 : ರೋಟರಿ ಜಿಲ್ಲೆ 3181 ವತಿಯಿಂದ ಕೊಡಗಿನ ಅತಿವೃಷ್ಟಿ ಹಾನಿ ಸಂತ್ರಸ್ತರಿಗಾಗಿ ನಿರ್ಮಿಸಿರುವ 25 ಮನೆಗಳನ್ನು ಇದೇ ಜೂ.18 ರಂದು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವದು ಎಂದು ರೋಟರಿ ಜಿಲ್ಲಾ ಗವರ್ನರ್ ಪಿ.ರೋಹಿನಾಥ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಟರಿ ಜಿಲ್ಲೆ 3181 ನ ಗವರ್ನರ್ ರೋಹಿನಾಥ್, ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ, ಮನೆ ಹಾನಿಗೊಳಗಾದ ಸಂತ್ರಸ್ತರನ್ನು ಹ್ಯಾಬಿಟೆಟ್ ಫಾರ್ ಹ್ಯೂಮ್ಯನಿಟಿ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಗುರುತಿಸಲಾಗಿದ್ದು ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದ 25 ಸಂತ್ರಸ್ತ ಫಲಾನುಭವಿ ಗಳಿಗಾಗಿ ರೋಟರಿಯಿಂದ ಸಂಗ್ರಹಿಸಿದ ಅನುದಾನದಲ್ಲಿ ನಿರ್ಮಿಸಲಾದ 25 ಮನೆಗಳನ್ನು ತಾ. 18 ರಂದು ಇಗ್ಗೋಡ್ಲುವಿನಲ್ಲಿ ಹಸ್ತಾಂತರಿಸಲಾಗುತ್ತದೆ. ಅಂತರರಾಷ್ಟ್ರೀಯ ರೋಟರಿಯ ಮಾಜಿ ಅಧ್ಯಕ್ಷ ಕಲ್ಯಾಣ್ ಬ್ಯಾನರ್ಜಿ, ರೋಟರಿ ಅಂತರರಾಷ್ಟ್ರೀಯ ನಿರ್ದೇಶಕ ಸಿ.ಭಾಸ್ಕರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಹ್ಯಾಬಿಟೆಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜನ್ ಸ್ಯಾಮ್ಯುವೆಲ್ ಪಾಲ್ಗೊಳ್ಳಲಿ ದ್ದಾರೆ ಎಂದು ಮಾಹಿತಿ ನೀಡಿದರು.
ರೋಟರಿ ಜಿಲ್ಲೆ 3181 ನಿಂದ ಈವರೆಗೆ ಕೊಡಗಿನ ಸಂತ್ರಸ್ತರಿಗಾಗಿ ಮನೆ ನಿರ್ಮಾಣಕ್ಕಾಗಿ ರೋಟರಿ ಜಿಲ್ಲೆಯ 75 ಕ್ಲಬ್ಗಳ ಸಹಕಾರದಲ್ಲಿ 1.50 ಕೋಟಿ ರೂ. ಸಂಗ್ರಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎರಡನೇ ಹಂತವಾಗಿ ಮತ್ತಷ್ಟು ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದೂ ರೋಹಿನಾಥ್ ಹೇಳಿದರು. 25 ಮನೆಗಳ ಪೈಕಿ 18 ಮನೆಗಳು ಪೂರ್ಣಗೊಂಡಿದ್ದು 7 ಮನೆಗಳು ಅಂತಿಮ ಹಂತದಲ್ಲಿದೆ ಎಂದು ರೋಹಿನಾಥ್ ತಿಳಿಸಿದರು.
ರಿಬಿಲ್ಡ್ ಕೊಡಗು ಯೋಜನೆಯ ಅಧ್ಯಕ್ಷ ಡಾ.ಕೆ.ರವಿಅಪ್ಪಾಜಿ ಮಾಹಿತಿ ನೀಡಿ, ತಲಾ 5 ಲಕ್ಷ ರೂ. ವೆಚ್ಚದಲ್ಲಿ 320 ಚದರ ಅಡಿಯ ಮನೆಗಳನ್ನು ನಿರ್ಮಿಸಲಾಗಿದೆ. ಮಳೆಗಾಲಕ್ಕೆ ಮುನ್ನವೇ ಅರ್ಹ ಫಲಾನುಭವಿಗಳಿಗೆ ರೋಟರಿಯಿಂದ ಮನೆಗಳನ್ನು ನೀಡಲಾಗುತ್ತಿದೆ. ಪ್ರತೀ ಮನೆಯ ಮುಂಭಾಗ ಫಲಾನುಭವಿಯ ಹೆಸರು, ಮನೆ ನಿರ್ಮಿಸಲು ಆರ್ಥಿಕ ನೆರವು ನೀಡಿದವರ ಹೆಸರನ್ನು ಅಳವಡಿಸಲಾಗುತ್ತದೆ. ಅಂತೆಯೇ ರೋಟರಿ ಲೋಗೋವನ್ನೂ ಹಾಕಲಾಗುತ್ತದೆ ಎಂದರಲ್ಲದೇ, ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ರೋಟರಿಯ ಮಾಜಿ ಅಧ್ಯಕ್ಷರು ಕೊಡಗಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ರೋಟರಿ ಜಿಲ್ಲಾ ಮಾಜಿ ಗವರ್ನರ್ ಕೃಷ್ಣಶೆಟ್ಟಿ ಮಾತನಾಡಿ, ಜಲಪ್ರಳಯಕ್ಕೊಳಗಾದ ಕೊಡಗಿನ ಸಂತ್ರಸ್ತರ ನೆರವಿಗೆ ರೋಟರಿ ಜಿಲ್ಲೆ ವಿಳಂಭರಹಿತವಾಗಿ ಮುಂದಾಗಿದ್ದು ಹೀಗಾಗಿಯೇ ಇದೀಗ ಮನೆಗಳ ನಿರ್ಮಾಣ ವಿವಿಧ ರೋಟರಿ ಕ್ಲಬ್ ಗಳ ನೆರವಿನೊಂದಿಗೆ ಸಾಧ್ಯವಾಯಿತು. ಗುಣಮಟ್ಟದಲ್ಲಿ ರಾಜಿಯಾಗದಂತೆ ಮನೆಗಳನ್ನು ನಿರ್ಮಿಸಿದ್ದೇವೆ ಎಂದು ಹೇಳಿದರು.
ಹ್ಯಾಬಿಟೆಟ್ ಸಂಸ್ಥೆಯ ಅದಿಕಾರಿ ನರಸಿಂಹಮೂರ್ತಿ ಮಾತನಾಡಿ, ಸ್ವಂತ ಜಾಗದಲ್ಲಿ ಮನೆ ಹಾನಿಗೊಳಗಾದ ವರನ್ನು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಗುರುತಿಸಿ ಮನೆ ನಿರ್ಮಿಸಿಕೊಡಲಾಗಿದೆ. ಸರ್ಕಾರದ ಪಟ್ಟಿಯಲ್ಲಿ ಇಲ್ಲದ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಹ್ಯಾಬಿಟೇಟ್ ಫಾರ್ ಹ್ಯೂಮ್ಯನಿಟಿ ಇಂಡಿಯಾದ ಯೋಜನಾ ನಿರ್ದೇಶಕ ಜೇರೋಮ್ ಡಿಸೋಜಾ ಸುದ್ದಿಗೋಷ್ಟಿಯಲ್ಲಿದ್ದರು.
ರೋಟರಿಯಿಂದ ಸಂತ್ರಸ್ತರಿಗೆ ಮನೆ ಹಸ್ತಾಂತರ