ಭಾಗಮಂಡಲ, ಜೂ. 13: ಮೇಲ್ಸೇತುವೆ ಕಾಮಗಾರಿಯಿಂದಾಗಿ ಒಳಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲಿ, ಗದ್ದೆಗಳಲ್ಲಿ ಕೆಸರು ತುಂಬಿ ಸಮಸ್ಯೆ ಅನುಭವಿಸುವಂತಾಗಿದೆ. ಭಾಗಮಂಡಲ ನಿವಾಸಿ ಬಳ್ಳಡ್ಕ ಅಪ್ಪಾಜಿ ಅವರ ಗದ್ದೆಯಲ್ಲಿ ಕೆಸರು ನೀರು ಹರಿಯುತ್ತಿದ್ದು ಕಾವೇರಿ ನದಿ ಸೇರುತ್ತಿದೆ.ಗದ್ದೆಯ ಒಂದು ಪಾಶ್ರ್ವ ಕುಸಿದಿದ್ದು ಅಪಾರ ಪ್ರಮಾಣದಲ್ಲಿ ಗದ್ದೆಗೆ ಹಾನಿಯಾಗಿದೆ.