ಭಾಗಮಂಡಲ, ಜೂ. 13: ಇಲ್ಲಿಗೆ ಸಮೀಪದ ಕೋರಂಗಾಲದ ಅಂಬ್ರಾಟಿಪಳ್ಳ ಎಂಬಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಸೇತುವೆಯ ಎರಡೂ ಬದಿಯ ದಂಡೆಗಳು ಕುಸಿಯುತ್ತಿದ್ದು ಸದ್ಯದಲ್ಲಿಯೇ ಸಂಪರ್ಕ ಕಡಿತಗೊಳ್ಳುವ ನಿರೀಕ್ಷೆಯಿದೆ.
ತಲಕಾವೇರಿ-ಹುಣಸೂರು ಹೆದ್ದಾರಿಯಲ್ಲಿ ಹೊಸದಾಗಿ ಅಂಬ್ರಾಟಿಪಳ್ಳ ಸೇತುವೆಯನ್ನು ನಿರ್ಮಾಣ ಮಾಡಿದ್ದು ವಾಹನಗಳ ಸಂಚಾರಕ್ಕಾಗಿ ಎರಡು ಬದಿ ಮಣ್ಣುತುಂಬಿ ದಂಡೆ ನಿರ್ಮಿಸಲಾಗಿದೆ.ಇದೀಗ ಮಳೆ ನೀರಿನಲ್ಲಿ ಮಣ್ಣು ಕೊಚ್ಚಿಹೋಗುತ್ತಿದ್ದು ಕೆಸರಿನಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಬಂದೊದಗಿದೆ.ಇನ್ನೆರಡು ದಿನ ಮಳೆ ಸುರಿದರೆ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ.ಕೂಡಲೇ ಸಂಬಂಧಿಸಿದವರು ಹಾಗೂ ಗುತ್ತಿಗೆದಾರರು ಗಮನಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.