ಮಡಿಕೇರಿ, ಜೂ. 13: ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ಕೊಡಗು ಜಿಲ್ಲೆಯವರಾದ ಅಜ್ಜಿಕುಟ್ಟಿರ ಎಸ್.ಬೋಪಣ್ಣ ಅವರನ್ನು ಅಭಿನಂದಿಸುವ ಕಾರ್ಯಕ್ರಮವು ಪೊನ್ನಂಪೇಟೆಯ ವಕೀಲರ ಸಂಘದ ವತಿಯಿಂದ ತಾ. 14 ರಂದು (ಇಂದು) ಸಂಜೆ 6 ಗಂಟೆಗೆ ಪೊನ್ನಂಪೇಟೆಯ ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ವಕೀಲರ ಸಂಘ ತಿಳಿಸಿದೆ.