ಮಡಿಕೇರಿ, ಜೂ. 11: ಪಾಲಿಬೆಟ್ಟ ಗ್ರಾ.ಪಂ.ನ ವಾರ್ಡ್ 3ರ ವಾರ್ಡ್ ಸಭೆ ತಾ. 12 ರಂದು (ಇಂದು) ಪಂಚಾಯಿತಿ ಸಭಾಂಗಣದಲ್ಲಿ ವಾರ್ಡ್ ಅಧ್ಯಕ್ಷ ಅಬ್ದುಲ್ ರಜಾಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಾರ್ಡ್ 2ರ ವಾರ್ಡ್ ಸಭೆಯನ್ನು ತಾ. 13 ರಂದು ರೋಬಸ್ಟ್ ಕ್ಲಬ್ ಮೇಕೂರಿನಲ್ಲಿ ವಾರ್ಡ್ ಅಧ್ಯಕ್ಷ ದೀಪಕ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ವಾರ್ಡ್ 1ರ ಸಭೆ ತಾ. 15 ರಂದು ದೊಡ್ಡ ಎಮ್ಮೆಗುಂಡಿಯಲ್ಲಿ ವಾರ್ಡ್ ಅಧ್ಯಕ್ಷ ಪಿ.ಪಿ. ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಗ್ರಾಮ ಸಭೆ: ಪಾಲಿಬೆಟ್ಟ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಮೊದಲನೇ ಹಂತದ ಗ್ರಾಮ ಸಭೆಯನ್ನು ತಾ. 21 ರಂದು ಪೂರ್ವಾಹ್ನ 11 ಗಂಟೆಗೆ ಪಾಲಿಬೆಟ್ಟ ಗ್ರಾ.ಪಂ. ಸಮುದಾಯ ಭವನದಲ್ಲಿ ಗ್ರಾ.ಪಂ.ಯ ಅಧ್ಯಕ್ಷ ಪಿ.ಪಿ.ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.