ವೀರಾಜಪೇಟೆ, ಜೂ. 12: ಬಡವನಾಗಿ ಹುಟ್ಟಿದರು ಬಡವನಾಗಿಯೇ ಸಾಯಬೇಕು ಎಂಬದರ ಬದಲು ಉತ್ತಮ ಬದುಕು ರೂಪಿಸಿಕೊಂಡು ಬದುಕುವ ಸಂಕಲ್ಪ ವಿದ್ಯಾರ್ಥಿಗಳದ್ದಾಗಬೇಕು ಎಂದು ಜೀವನ ಜ್ಯೋತಿ ಟ್ರಸ್ಟ್ ಅಧ್ಯಕ್ಷ ಅಜಯರಾವ್ ಅಭಿಪ್ರಾಯಪಟ್ಟರು.
ಆರ್ಜಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಹಾಗೂ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶನಿಶ್ವರ ಭಕ್ತ ಜನ ಮಂಡಳಿಯ ಅಧ್ಯಕ್ಷ ಯುವರಾಜ್ ಮಾತನಾಡಿ, ಇಂದು ಕೆಲವರ ಸ್ವಾರ್ಥಕ್ಕೆ ಮರಗಳನ್ನು ಕಡಿದ ಕಾರಣ ಕೊಡಗಿನ ಪ್ರಕೃತಿ ಬರಿದಾಗಿದೆ ಎಂದರು.
ಜೀವನ್ ಜ್ಯೋತಿ ಟ್ರಸ್ಟ್‍ನ ಕಾರ್ಯದರ್ಶಿ ಬಿ.ಎಸ್. ಸೋಮಪ್ಪ, ಸದಸ್ಯರಾದ ಪುರುಷೋತ್ತಮ, ಸುಬ್ರಮಣಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ ಮಂಜುನಾಥ್, ಸಹ ಶಿಕ್ಷಕಿ ಕವಿತಾ ಉಪಸ್ಥಿತರಿದ್ದರು.