ಸುಳ್ಯ, ಜೂ. 11: ಇತ್ತೀಚೆಗೆ ನಿವೃತ್ತಿ ಹೊಂದಿದ ಪೆರಾಜೆ ಜ್ಯೋತಿ ಪ್ರೌಢಶಾಲಾ ಮುಖ್ಯಶಿಕ್ಷಕ ಪುರುಷೋತ್ತಮ ಕಿರ್ಲಾಯರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಜ್ಯೋತಿ ಆಂಗ್ಲ ಮಾದ್ಯಮ ಪೂರ್ವ ಪ್ರಾಥಮಿಕ ಶಾಲಾ ಉದ್ಘಾಟನಾ ಸಮಾರಂಭ ನಡೆಯಿತು.
ಅಧ್ಯಕ್ಷತೆಯನ್ನು ಜ್ಯೋತಿ ವಿದ್ಯಾಸಂಘದ ಅಧ್ಯಕ್ಷ ಹಾಗೂ ಕೆವಿಜಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರು ಡಾ. ಜ್ಞಾನೇಶ್ ವಹಿಸಿದ್ದರು.
ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಪುರುಷೋತ್ತಮ ಕಿರ್ಲಾಯ ದಂಪತಿಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಶಾಲೆಯ ಪರವಾಗಿ ಸನ್ಮಾನಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕೊಡಗು ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಧರಣೀಧರ ಭಾಗವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಕುಮಾರ್ ಕುಂಬಳಚೇರಿ, ಶಾಲಾ ಸ್ಥಾಪಕ ಶಿಕ್ಷಕ ಪೂವಪ್ಪ ದೊಡ್ಡಡ್ಕ, ಪೆರಾಜೆ ಶ್ರೀಶಾಸ್ತಾವು ದೇವಳದ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ ಇದ್ದರು. ಶಾಲಾ ಸಂಚಾಲಕ ಹರೀಶ್ಚಂದ್ರ ಮುಡ್ಕಜೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಷಕ ದೊಡ್ಡಣ್ಣ ಬರೆಮೇಲು ವಂದಿಸಿದರು. ಜ್ಯೋತಿ ವಿದ್ಯಾಸಂಘದ ನಿರ್ದೇಶಕ ಲೋಕನಾಥ ಅಮೆಚೂರು ನಿರೂಪಿಸಿದರು.