ಶನಿವಾರಸಂತೆ, ಜೂ. 11: ಹೆಬ್ಬುಲಸೆ ಗ್ರಾಮದ ಹೆಚ್.ಎಸ್. ರಂಜಿನಿ ಮಣಿಪಾಲದ ಕೆ.ಎಂ.ಸಿ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‍ನಿಂದ ಪಿ.ಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ.

ಜೀವರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪದ್ಮನಾಭ ಉಡುಪ ಮಾರ್ಗದರ್ಶನದಲ್ಲಿ ‘ಇನ್ ವಿಟ್ಟೋಸ್ಪಡಿ ಆಫ್ ನ್ಯಾಚುರಲ್ ಇನ್ ಹೆಬಿಟರ್ಸ್ ಆಫ್ ಆಂಜಿಯೋಟೆನ್ ಸಿನ್ ಕನ್ವರ್ಟಿಂಗ್ ಎನ್ ಜೈಮ್ ಇನ್ ಶೀಪ್ (ಓವೀಸ್ ಏರೀಸ್) ಟಿಶ್ಯುಸ್’ ವಿಷಯದ ಬಗ್ಗೆ ಮಹಾಪ್ರಬಂಧವನ್ನು ಮಂಡಿಸಿದ್ದರು.

ರಂಜಿನಿ ಹೆಚ್.ಡಿ. ಶಿವಾನಂದ್ ಮತ್ತು ಹೆಚ್.ಎಸ್. ವೇದಾವತಿ ದಂಪತಿಯ ಪುತ್ರಿ.