ಕುಶಾಲನಗರ, ಜೂ. 11: ಕುಶಾಲನಗರದಲ್ಲಿ 500 ರೂ. ಮುಖಬೆಲೆಯ ನಕಲಿ ನೋಟು ಪತ್ತೆಯಾಗಿದೆ. ಸ್ಥಳೀಯ ಉದ್ಯಮಿ ವಿ.ಡಿ. ಪುಂಡರೀಕಾಕ್ಷ ಅವರು ಕುಶಾಲನಗರ ಕೆನರಾ ಬ್ಯಾಂಕ್ನಲ್ಲಿ 50 ಸಾವಿರ ನಗದೀಕರಿಸಿ ಸಮೀಪದ ಸ್ಟೇಟ್ ಬ್ಯಾಂಕ್ನಲ್ಲಿ ಖಾತೆಗೆ ಜಮಾ ಮಾಡುವ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದೆ.
ತಕ್ಷಣ ತಾನು ಕೆನರಾ ಬ್ಯಾಂಕ್ಗೆ ಮಾಹಿತಿ ನೀಡಿ ನೋಟನ್ನು ಹಿಂತಿರುಗಿಸಿ ಬದಲೀ ನೋಟು ಪಡೆದುಕೊಂಡಿರುವದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕುಶಾಲನಗರ, ಕೂಡಿಗೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ 500 ಮುಖಬೆಲೆಯ ನಕಲಿ ನೋಟುಗಳ ಹಾವಳಿ ಕಂಡುಬಂದಿದೆ ಎಂದು ಪುಂಡರೀಕಾಕ್ಷ ಮಾಹಿತಿ ನೀಡಿದ್ದಾರೆ.