ಮಡಿಕೇರಿ, ಜೂ. 11: ಜಿಲ್ಲೆಯಲ್ಲಿ ತಾ. 13ರ ವರೆಗೆ ಭಾರೀ ಮಳೆ ಮತ್ತು ಗಾಳಿಯು ಮುಂದುವರೆಯಲಿರು ವದಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರಿನಿಂದ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.ತಾ. 14 ರಿಂದ ತಾ. 20ರ ವರೆಗೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಆದರೂ ಸಹ ಜಿಲ್ಲೆಯ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರೀ ಮಳೆ ಆಗುವ ಸಂಭವ ಇದೆ.ತಾ. 20ರ ನಂತರ ಜಿಲ್ಲೆಯಲ್ಲಿ ಮತ್ತೆ ಮುಂಗಾರು ಮಳೆಯು ಚುರುಕು ಗೊಳ್ಳಲಿದೆ. ಈ ಸಂದರ್ಭಗಳಲ್ಲಿ ಸಾರ್ವಜನಿಕರು ಸಂಬಂಧಿತ ಯಾವದೇ ಸಮಸ್ಯೆಗಳಿಗೆ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸ ಬಹುದಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.ತುರ್ತು ಸೇವೆಗೆ ಟೋಲ್ ಪ್ರಿüೀ ಸಂS್ಯÉ 24x7 ಕಂಟ್ರೋಲ್ ರೂಂ: 1077 ವಾಟ್ಸ್ ಆಪ್ ಸಂಖ್ಯೆ: 8550001077