ಕುಶಾಲನಗರ, ಜೂ. 12: ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಕುಶಾಲನಗರ ಹೋಬಳಿ ಸಂಘದ ಮಹಾಸಭೆ ಸ್ಥಳೀಯ ಕೊಡವ ಸಮಾಜ ಸಭಾಂಗಣದಲ್ಲಿ ನಡೆÉಯಿತು.
ಸಂಘದ ಉಪಾಧ್ಯಕ್ಷ ಕೆ.ಜಿ.ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಕಳೆದ ಮಹಾಸಭೆ ವರದಿ, ಆಡಳಿತ ಮಂಡಳಿಯ ವರದಿ, ಲೆಕ್ಕಪರಿಶೋಧನಾ ವರದಿಗಳನ್ನು ಸಂಘದ ಪದಾಧಿಕಾರಿಗಳು ವಾಚಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಆಡಳಿತ ಮಂಡಳಿಯ ನೂತನ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ಸಂಘದ ಅಧ್ಯಕ್ಷ ಎಚ್.ಎಂ.ಅಹಮ್ಮದ್, ನಿವೃತ್ತ ಶಿಕ್ಷಕ ಬಾಚರಣಿಯಂಡ ಅಪ್ಪಣ್ಣ, ಕುಶಾಲನಗರ ಹೋಬಳಿ ಸಂಘದ ಸಂಘಟನಾ ಕಾರ್ಯದರ್ಶಿ ಜಾನಕಿಅಪ್ಪಣ್ಣ, ಖಜಾಂಚಿ ಸಿ.ಸಿ.ರಾಘವಯ್ಯ ಸೇರಿದಂತೆ ನಿರ್ದೇಶಕರುಗಳು ಇದ್ದರು.