ಸುಂಟಿಕೊಪ್ಪ, ಜೂ. 12: ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಕ್ಲಬ್ (ಎಂಸಿಸಿ) ಎಂದೇ ಕೊಡಗಿನಲ್ಲಿ ಹೆಸರಾದ ಕ್ಲಬ್‍ನ ಸುವರ್ಣ ಮಹೋತ್ಸವದ ಅಂಗವಾಗಿ ಕ್ಲಬ್‍ನ ಹಿರಿಯ ಕಾಲ್ಚೆಂಡು ಆಟಗಾರರಾಗಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ಕೊಲ್ಕತ್ತಾ ಮಹಾಬಲನ್ ತಂಡದ ಹಿರಿಯ ಆಟಗಾರರೂ ಈ ಕ್ಲಬ್‍ನ ಸದಸ್ಯರಾದ ಜಿಪ್ಪುರನ ಅಣ್ಣಪ್ಪ, ಕ್ಲಬ್ ಸ್ಥಾಪಕ ಉಪಾಧ್ಯಕ್ಷ ಖ್ಯಾತ ಕ್ರೀಡಾಪಟು ಪುಟ್ಟಯ್ಯ ವಾಸು ಬೆಂಗಳೂರಿನ ಉಪನೋಂದಾವಣೆ ಇಲಾಖೆಯ ಅಧಿಕಾರಿ ಕ್ಲಬ್‍ನ ಹಿರಿಯ ಸದಸ್ಯರಾದ ಶಿವರಾಂ, ಕರ್ನಾಟಕ ಹಾಗೂ ರಾಷ್ಟ್ರೀಯ ಫುಟ್ಬಾಲ್‍ನ ಜೂನಿಯರ್ ತಂಡದ ಆಟಗಾರರಾಗಿದ್ದ ಮಡಿಕೇರಿ ಕ್ರೀಡಾ ಪ್ರಾಧಿಕಾರದ(ಸಾಯಿ)ಯ ನಿವೃತ್ತ ಅಧಿಕಾರಿ ಎನ್.ಕೆ. ರವೀಂದ್ರ ಹಾಗೂ ಕರ್ನಾಟಕ ಜೂನಿಯರ್ ಫುಟ್ಬಾಲ್ ತಂಡದ ಉದಯೋನ್ಮುಖ ಆಟಗಾರ ಎಂಸಿಸಿ ಕ್ಲಬ್‍ನ ಸದಸ್ಯರಾದ ತೌಸಿಕ್ ಅಹ್ಮದ್ ಅವರುಗಳನ್ನು ಈ ಸಂದರ್ಭ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.