ಮಡಿಕೇರಿ, ಜೂ. 10: ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಂತಾಪ ಸೂಚಿಸಲಾಯಿತು. ಪರಿಷತ್ತು ಕಚೇರಿಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕಾರ್ನಾಡರ ಕುರಿತು ಮಾತನಾಡಿದರು. ಈ ಸಂದರ್ಭ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಗೌರವ ಕಾರ್ಯದರ್ಶಿಗಳಾದ ಡಾ. ಕೂಡಕಂಡಿ ದಯಾನಂದ್, ಬಾಳೆಯಡ ಕಿಶನ್ ಪೂವಯ್ಯ, ಜಿಲ್ಲಾ ನಿರ್ದೇಶಕರುಗಳಾದ ಕೆ.ಕೆ. ನಾಗರಾಜಶೆಟ್ಟಿ, ವಿ.ಎಸ್. ನೀಲಾಧರ್, ಸಿರಿಗನ್ನಡ ವೇದಿಕೆ ಹಾಗೂ ಅಲ್ಲಾರಂಡ ರಂಗ ಛಾವಡಿ ಅಧ್ಯಕ್ಷ ವಿಠಲ್ ನಂಜಪ್ಪ, ಕ.ಸಾ.ಪ. ಕಚೇರಿ ಸಿಬ್ಬಂದಿ ಸ್ವೇತಾ ಇನ್ನಿತರರಿದ್ದರು.