ಮಡಿಕೇರಿ, ಜೂ. 10 : ವಲ್ರ್ಡ್ ಟೆಕ್ವಾಂಡೋ ಫೆಡರೇಶನ್ ವತಿಯಿಂದ ಹೈದರಾಬಾದ್ನ ವಿಜಯಭಾಸ್ಕರ್ ರೆಡ್ಡಿ ಒಳಾಂಗಣ ಕ್ರೀಡಾಂಗಣದಲ್ಲಿ ತಾ. 11 ರಿಂದ (ಇಂದಿನಿಂದ) ತಾ. 16ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಟೆಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಕೊಡಗಿನ ಇಬ್ಬರು ವಿದ್ಯಾರ್ಥಿಗಳು ಪ್ರತಿನಿಧಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮಡಿಕೇರಿ ನಿವಾಸಿ ಎಂ.ಆರ್. ಜಗದೀಶ್ ಮತ್ತು ಪ್ರಿಯದರ್ಶಿನಿ ದಂಪತಿ ಪುತ್ರ ಕೊಡಗು ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ ಎಂ.ಜೆ. ಅಕ್ಷಯ ಹಾಗೂ ಮಡಿಕೇರಿಯ ನಿವಾಸಿ ಶೇಷಗಿರಿ ಮತ್ತು ಭಾಗೀರಥಿ ದಂಪತಿಗಳ ಪುತ್ರಿ ಚೇತನಾಶ್ರೀ ಕೆಡೆಟ್ ವಿಭಾಗದ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುತ್ತಿದ್ದಾರೆ.
ಈ ಇಬ್ಬರು ವಿದ್ಯಾರ್ಥಿಗಳು ಮರ್ಕರಾ ಟೆಕ್ವಾಂಡೊ ಕ್ಲಬ್ನ ಮಾಸ್ಟರ್ ಕುಶಾಲ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಚಾಂಪಿಯನ್ಶಿಪ್ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ದೇಶಗಳ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, ಈ ಚಾಂಪಿಯನ್ಶಿಪ್ನಲ್ಲಿ ವಿಜೇತರಾದವರು ಏಷ್ಯನ್ ಗೇಮ್ಸ್ ರ್ಯಾಕಿಂಗ್ನ ಆಯ್ಕೆಪಟ್ಟಿಯಲ್ಲಿ ಅರ್ಹತೆ ಪಡೆಯುತ್ತಾರೆ.