ಸೋಮವಾರಪೇಟೆ,ಜೂ.10 : ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಸೋಮವಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿರುವ ಘಟನೆ ಸಮೀಪದ ಕಾರೇಕೊಪ್ಪದಲ್ಲಿ ನಡೆದಿದೆ.

ಕಾರೇಕೊಪ್ಪ ನಿವಾಸಿ ಕೆ.ಎ. ರವಿ ಎಂಬಾತ ತಮ್ಮ ಮನೆಯಲ್ಲಿ ಅಕ್ರಮ ವಾಗಿ ಮದ್ಯ ಸಂಗ್ರಹಿಸಿಟ್ಟು ಅಂಗಡಿ ಯಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದ್ದು, ಮನೆಯಲ್ಲಿ ದಾಸ್ತಾನಿರಿ ಸಿದ್ದ 3 ಲೀಟರ್ ರಮ್, ಬ್ರಾಂಡಿ, 2 ಲೀಟರ್ ಬಿಯರ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅಕ್ರಮ ಜೂಜು: ತಾಲೂಕಿನ ಐಗೂರು ಗ್ರಾಮದಲ್ಲಿ ಅಕ್ರಮ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ಸೋಮವಾರಪೇಟೆ ಪೊಲೀಸರು ಧಾಳಿ ನಡೆಸಿದ್ದು, ಪಣಕ್ಕಿಟ್ಟಿದ್ದ ರೂ. 20,500 ಸೇರಿದಂತೆ ಸ್ಥಳದಲ್ಲಿದ್ದ ಆಟೋವನ್ನು ವಶಕ್ಕೆ ಪಡೆದು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಕಾರ್ಯಾ ಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಎಸ್.ಐ. ಮೋಹನ್ ರಾಜ್, ಸಿಬ್ಬಂದಿಗಳಾದ ಜಗದೀಶ್, ಪ್ರವೀಣ್, ಮಧು, ಧನಲಕ್ಷ್ಮೀ, ಶಿವಕುಮಾರ್ ಅವರುಗಳು ಭಾಗವಹಿಸಿದ್ದರು.