ಸಿದ್ದಾಪುರ, ಜೂ. 8: ಕಾರೊಂದು ಅಪಘಾತಕ್ಕೀಡಾದ ಪರಿಣಾಮ ಪುಟ್ಟ ಹಸುಳೆ ಅಸುನೀಗಿರುವ ಕರುಣಾಜನಕ ದುರ್ಘಟನೆ ನಿನ್ನೆ ಕೇರಳದಲ್ಲಿ ಸಂಭವಿಸಿದೆ. ಕಣ್ಣೂರು ಜಿಲ್ಲೆಯ ವಳ್ಳಿತ್ತೋಡ್ ಆನಕುತ್ತಿ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಓಮ್ನಿ ಕಾರು ರಸ್ತೆ ಬದಿಯ ಮಣ್ಣಿನ ಬರೆಗೆ ಡಿಕ್ಕಿ ಹೊಡೆದ ಪರಿಣಾಮ ಪುಟ್ಟ ಮಗು ಸಾವನ್ನಪ್ಪಿದೆ.
ನೆಲ್ಯಹುದಿಕೇರಿ ನಲ್ವತೇಕ್ರೆಯ ನಿವಾಸಿಗಳಾದ ಶಿಹಾಬ್ - ಫರ್ಸಾನ ದಂಪತಿಗಳು ಐದು ತಿಂಗಳ ಹಸುಳೆ ಮುಹಮ್ಮದ್ ಸಿದಾನ್ ಸಾವನ್ನಪಿದೆ. ಇವರಲ್ಲದೆ ಕುಟುಂಬದ ಐದು ಮಂದಿ ಕಾರಿನಲ್ಲಿದ್ದರೂ ಅದೃಷ್ಟವಶಾತ್ ಚಿಕ್ಕಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಣ್ಣೂರಿನಿಂದ ಸಿದ್ದಾಪುರಕ್ಕೆ ಬರುವ ಮಾರ್ಗದ ಮಧ್ಯೆ ಶುಕ್ರವಾರ ಸಂಜೆ ಅಪಘಾತ ಸಂಭವಿಸಿದೆ. ಅಲ್ಲಿನ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.