ಸಿದ್ದಾಪುರ ಜೂ 10: ಸಂಶಯಾಸ್ಪದ ರೀತಿಯಲ್ಲಿ ತೋಟ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲದ ಹುಂಡಿಯಲ್ಲಿ ನಡೆದಿದೆ.
ಬಾಡಗ ಬಾಣಂಗಾಲ ಗ್ರಾಮದ ಹುಂಡಿ ನಿವಾಸಿ ಗುಡ್ಡಂಡ ಮೊಣ್ಣಪ್ಪ ಎಂಬವರಿಗೆ ಸೇರಿದ ಗೌರಿಕೊಲ್ಲಿ ಕಾಫಿ ತೋಟದಲ್ಲಿ ರಾಜು ಹಾಗೂ ಆತನ ಪತ್ನಿ ಯರವರ ತಂಗಿ ಕೆಲಸ ಮಾಡುತ್ತಿದ್ದು, ತಾ.4 ರಂದು ತಂಗಿ ಕೆಲಸಕ್ಕೆ ಬಂದಿದ್ದಳು ನಂತರ ಬರಲಿಲ್ಲ. ಸಂಶಯಗೊಂಡ ತೋಟದ ರೈಟರ್ ಮೊಯ್ದಿನ್ ಹಾಗೂ ಶಮೀಲ್ ಲೈನ್ ಮನೆಗೆ ತೆರಳಿ ನೋಡಿದಾಗ ತಂಗಿ ಮೃತಪಟ್ಟಿರುವದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮೊಣ್ಣಪ್ಪ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ತಂಗಿಯ ಪತಿ ರಾಜು ನಾಪತ್ತೆಯಾಗಿದ್ದು, ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸಂಬಂಧಿಕರು ಯಾರಾದರೂ ಇದ್ದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಠಾಣಾಧಿಕಾರಿ ಮಹೇಶ್ ತಿಳಿಸಿದ್ದಾರೆ.