ಸೋಮವಾರಪೇಟೆ,ಜೂ.7: ಗಾಂಧಿನಗರದ ಈದ್ಗಾ ಮೈದಾನಕ್ಕೆ ರಂಜಾನ್ ದಿನ ಪ್ರಾರ್ಥನೆಗೆ ತೆರಳುತ್ತಿದ್ದ ಸಂದರ್ಭ ಗಾಂಧಿನಗರದ ಪ್ರವೀಣ್ ಚಾಲಿಸುತ್ತಿದ್ದ ಕಾರು ಬಾಲಕನೋರ್ವನಿಗೆ ಡಿಕ್ಕಿಪಡಿಸಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಟ್ಟಣ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಜನತಾಕಾಲನಿಯ ಹುಮಾಯೂನ್ ಬೇಗ್ ಅವರ ಪುತ್ರ ರಿಹಾನ್ಬೇಗ್ ದೂರು ನೀಡಿದ್ದು, ನಾನು ಮತ್ತು ಮಹಮ್ಮದ್ ಫೈಸಲ್ ತೆರಳುತ್ತಿದ್ದ ಸಂದರ್ಭ, ಈದ್ಗಾ ಮೈದಾನದ ಸಮೀಪದ ರಸ್ತೆಯಲ್ಲಿ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ ಎಂದು ದೂರು ನೀಡಲಾಗಿದೆ. ಕಾರು ಚಾಲಕ ಪ್ರವೀಣ್ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.