ಮಡಿಕೇರಿ, ಜೂ. 8: ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರುಗಳಾಗಿ ಇ.ಆರ್. ಅಬ್ದುಲ್ ಖಾದರ್ ಹಾಗೂ ಅಬ್ದುಲ್ ರೆಹಮಾನ್ ಅಧಿಕಾರ ಸ್ವೀಕರಿಸಿದರು. ನಗರದಲ್ಲಿರುವ ಸಮಿತಿಯ ಕಚೇರಿಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕುಬ್ ಅವರು ನೂತನ ಉಪಾಧ್ಯಕ್ಷರುಗಳಿಗೆ ಆದೇಶ ಪತ್ರವನ್ನು ನೀಡಿದರು. ಈ ಸಂದರ್ಭ ಕೊಡಗು ಜಿಲ್ಲಾ ವಕ್ಫ್ ಅಧಿಕಾರಿ ಸಹದುಲ್ ರೆಹಮಾನ್, ಸದಸ್ಯರಾದ ಅಬ್ದುಲ್ ಸಮದ್, ಮೌಲನ ಮೊಹಮ್ಮದ್ ಹಾಗೂ ಕಚೇರಿ ಸಿಬ್ಬಂದಿಗಳು ಹಾಜರಿದ್ದರು. ವಕ್ಫ್ ಮಂಡಳಿಯಲ್ಲಿ ಸದಸ್ಯರುಗಳಾಗಿ 17 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.