ಮಡಿಕೇರಿ, ಜೂ. 8: ತಾ. 19 ರಂದು ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಹನ್ನೊಂದನೇ ವರ್ಷದ ಬಿದ್ದಂಡ ಪೂವಮ್ಮ ಮತ್ತು ಅಯ್ಯಪ್ಪ ಅವರ ಜ್ಞಾಪಕಾರ್ಥವಾಗಿ ಸಂಗೀತ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಿರಿಯರ ವಿಭಾಗದಲ್ಲಿ 6ರಿಂದ 12 ವರ್ಷ ಪ್ರಾಯದವರಿಗೆ ಪೂರ್ವಾಹ್ನ 8.15ರಿಂದ, ಸಮಯ ಮಿತಿ 3 ನಿಮಿಷ. ಹಾಡು : ಬಸವಣ್ಣ ಮತ್ತು ಇತರರ ವಚನಗಳು.

ಹಿರಿಯರ ವಿಭಾಗದಲ್ಲಿ 13 ರಿಂದ 21 ವರ್ಷ ಪ್ರಾಯದವರೆಗೆ. ಅಪರಾಹ್ನ 1.30ರಿಂದ. ಸಮಯ ಮಿತಿ : 4 ನಿಮಿಷ. ಹಾಡು : ಶಾಸ್ತ್ರೀಯ ಸಂಗೀತ- ಕೀರ್ತನೆಗಳು. (ತ್ಯಾಗರಾಜ ಹಾಗೂ ಇತರರ ರಚನೆ) ಶ್ರುತಿ ಮತ್ತು ತಾಳ ಬದ್ಧವಾಗಿರತಕ್ಕದ್ದು. ಹಾಡಿನ ರಾಗ, ತಾಳ ಹಾಗೂ ರಚಿಸಿದವರ ಹೆಸರು ಮತ್ತು ಹಾಡಿನ ಒಂದು ಪ್ರತಿಯನ್ನು ತೀರ್ಪುಗಾರರಿಗೆ ನೀಡತಕ್ಕದ್ದು. ಸ್ಪರ್ಧಿಗಳು ಶಾಲಾ - ಕಾಲೇಜುಗಳಿಂದ ವಯಸ್ಸಿನ ದೃಢೀಕರಣ ಪತ್ರಗಳನ್ನು ತರತಕ್ಕದ್ದು.

ಜಿಲ್ಲೆಯೊಳಗಿನಿಂದ ಬರುವ ಸ್ಪರ್ಧಾಳುಗಳ ಬಸ್ ಶುಲ್ಕ ನೀಡಲಾಗುತ್ತದೆ ಹಾಗೂ ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗುತ್ತದೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಸ್ಪರ್ಧೆಗೆ ತೀರ್ಪುಗಾರರ ನಿರ್ಧಾರವೇ ಅಂತಿಮ ಒಂದು ಶಾಲೆಯಿಂದ ಒಂದು ವಿಭಾಗಕ್ಕೆ ಗರಿಷ್ಠ ಎರಡು ಸ್ಪರ್ಧಿಗಳನ್ನು ಕಳುಹಿಸಬಹುದು. ಒಂದೇ ಶಾಲೆಯ ಸ್ಪರ್ಧಿಗಳು ಬೇರೆ ಬೇರೆ ಹಾಡುಗಳನ್ನು ಹಾಡತಕ್ಕದ್ದು. ಹೆಚ್ಚಿನ ಮಾಹಿತಿಗೆ 9480557100, 9480653098ನ್ನು ಸಂಪರ್ಕಿಸಬಹುದಾಗಿದೆ.